More

    ಪುಸ್ತಕಗಳ ಓದಿದರೆ ಜ್ಞಾನ ವಿಕಾಸ – ಗ್ರಂಥಾಲಯಾಧಿಕಾರಿ

    ಕೊಟ್ಟೂರು: ವೈಜ್ಞಾನಿಕ ಆಲೋಚನೆಗೆ ಪುಸ್ತಕ ಓದುವ ಅಭ್ಯಾಸ ಬಹಳ ಮುಖ್ಯ. ನಿರಂತರವಾಗಿ ಪುಸ್ತಕಗಳನ್ನು ಓದುತ್ತಿದ್ದರೆ ನೆಮ್ಮದಿ, ಜ್ಞಾನ ವಿಕಾಸವಾಗುತ್ತದೆ ಎಂದು ಗ್ರಂಥಾಲಯಾಧಿಕಾರಿ ಮಲ್ಲಪ್ಪ ಗುಡ್ಲಾನೂರು ಹೇಳಿದರು.

    ಇದನ್ನೂ ಓದಿ: ರಾಮಾಯಣ ಬರೀ ಪುಸ್ತಕವಲ್ಲ, ಅದೊಂದು ಆದರ್ಶ

    ಪಟ್ಣಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಮಂಗಳವಾರ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುನೆಸ್ಕೊ 1995ರ ಏ.23 ರಂದು ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನಾಚರಣೆ ಘೋಷಿಸಿದೆ.

    ಇದನ್ನು ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಗ್ರಂಥಾಲಯ ಇಲಾಖೆ ಜಂಟಿಯಾಗಿ ಆಚರಿಸುತ್ತ ಬಂದಿದೆ. ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಹಿರಿಯ ನಾಗರಿಕರು, ಎಲ್ಲರೂ ಕೊಟ್ಟೂರು ಸಾರ್ವಜನಿಕ ಗ್ರಂಥಾಲಯವನ್ನು ಬಳಸಿಕೊಳ್ಳಬೇಕು. ಅಭಿರುಚಿಗೆ ತಕ್ಕಂತೆ ಪುಸ್ತಕಗಳು ಓದಬೇಕು ಎಂದರು.

    ಶಿಕ್ಷಕರಾದ ಸಿದ್ದೇಶ್ ಗೌಡ ಮಾತನಾಡಿ, ಗ್ರಂಥಾಲಯಗಳನ್ನು ಯಾರು ಸದ್ಬಳಕೆ ಮಾಡಿಕೊಳ್ಳುತ್ತಾರೋ ಅವರ ಮನಸ್ಸು ಪರಿಶುದ್ಧವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಲೈಬ್ರರಿಯಿಂದ ಬದುಕು ನಂದಾದೀಪವಾಗುತ್ತದೆ ಎಂದರು. ಓದುಗರಾದ ವೀರಭದ್ರಪ್ಪ ಮಾಮನಿ ಈಶ್ವರಪ್ಪ, ಅಕ್ಕಮಹಾದೇವಿ, ಹನುಮಕ್ಕ, ಎಚ್.ಮಮತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts