More

    ಮೇ 1ರಂದು ತುಲುವೆರೆ ಕಲ ವರ್ಸೋಚ್ಚಯ, 6 ಕೃತಿ ಬಿಡುಗಡೆ

    ಮಂಗಳೂರು: ತುಲುವೆರೆ ಕಲ ಸಂಘಟನೆ ವತಿಯಿಂದ ’ತುಲುವೆರೆ ಕಲ ವರ್ಸೋಚ್ಚಯ’ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಮೇ 1ರಂದು ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ನಡೆಯಲಿದೆ.

    ವಿದ್ಯಾಲಯ ಪ್ರಾಂಶುಪಾಲ ದಯಾನಂದ ಕಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತುಲುವೆರೆ ಕಲ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘಟನೆಯ ಯೂಟ್ಯೂಬ್ ಚಾನೆಲ್ ಅನ್ನು ಕದ್ರಿ ನವನೀತ ಶೆಟ್ಟಿ ಲೋಕಾರ್ಪಣೆಗೊಳಿಸಲಿದ್ದಾರೆ. ಕಾ.ವೀ ಕೃಷ್ಣದಾಸ್, ರಾಜೇಂದ್ರ ಪ್ರಸಾದ್ ಭಾಗವಹಿಸಲಿದ್ದಾರೆ. ಈ ಸಂದರ್ಭ ಸಂಘಟನೆ ಸದಸ್ಯರ ಬರಹಗಳ ‘ಬೊಲ್ಲಿದಾರಗೆ’, ‘ಉದಿಪು’, ‘ಉಪ್ಪರಿಗೆ’, ‘ತುಡರ್’, ‘ಕೇಪುಲ’, ‘ಪುಂಡಿಕಾಣಿಕೆ’ ಕೃತಿಗಳು ಬಿಡುಗಡೆಯಾಗಲಿದೆ. ವಿಜಯಲಕ್ಷ್ಮೀ ಕಟೀಲ್, ಡಾ.ಮೀನಾಕ್ಷಿ ರಾಮಚಂದ್ರ, ರಾಜಶ್ರೀ ಟಿ.ರೈ ಪೆರ್ಲ, ವೀಣಾ ಟಿ.ಶೆಟ್ಟಿ, ರಘು ಇಡ್ಕಿದು, ಅಕ್ಷಯಾ ಆರ್.ಶೆಟ್ಟಿ ಕೃತಿ ಬಿಡುಗಡೆಗೊಳಿಸಿ ಪರಿಚಯಿಸಲಿದ್ದಾರೆ. ಬಳಿಕ ‘ತುಳು ಸಾಹಿತ್ಯದ ಬುಲೆಚ್ಚಿಲ್‌ದ ತಾದಿ ಆನಿ-ಇನಿ-ನನ’ ವಿಚಾರದ ಕುರಿತು ಸಾಹಿತಿ ಮುದ್ದು ಮೂಡುಬೆಳ್ಳೆ ಸಂವಾದ ನಡೆಸಿಕೊಡಲಿದ್ದಾರೆ. ಹರಿಣಿ ಎಂ.ಶೆಟ್ಟಿ, ದಿವ್ಯಾ ಅಂಚನ್ ಪಕ್ಷಿಕೆರೆ, ಪದ್ಮನಾಭ ಪೂಜಾರಿ ನೇರಂಬೋಳು ಅವರಿಗೆ ‘ಕಲತ ಬೊಲ್ಲಿ’ ಪುರಸ್ಕಾರ ಪ್ರದಾನಿಸಲಾಗುವುದು. 40 ಕವಿಗಳಿಂದ ‘ಅಮೃತ ತುಲು ಚಿಟ್ಕಾ ಕಬಿಕೂಟ’, ಸಂಘಟನೆ ಸದಸ್ಯರಿಂದ ‘ಪದರಂಗಿತ ಮಿನದನ’ ಹಾಗೂ ‘ಚಾತುರ್ಪು ತೂಪರಿಕೆ’ ನಡೆಯಲಿದೆ. ಸದಾನಂದ ನಾರಾವಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts