More

    ಬಿರುಗಾಳಿಗೆ ಹೊಡೆತಕ್ಕೆ ಮುಳುಗಿದ ಹಡಗು; 4 ಭಾರತೀಯರು ಸೇರಿ 13 ಸಿಬ್ಬಂದಿ ನಾಪತ್ತೆ

    ಅಥೆನ್ಸ್: ಭಾನುವಾರ ಬೆಳಗ್ಗೆ ಗ್ರೀಕ್ ದ್ವೀಪವಾದ ಲೆಸ್ಬೋಸ್‌ನಲ್ಲಿ ಸರಕು ಸಾಗಣೆ ಹಡಗೊಂದು ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿದೆ. ಈ ಹಡಗಿನಲ್ಲಿದ್ದ ನಾಲ್ವರು ಭಾರತೀಯರು ಸೇರಿ 13 ಸಿಬ್ಬಂದಿ ನಾಪತ್ತೆಯಾಗಿದ್ದು, ಒಬ್ಬರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೊಮೊರೊಸ್‌ನಲ್ಲಿ ನೋಂದಾಯಿಸಲಾದ ಈ ನೌಕೆಯು ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಿಂದ ಇಸ್ತಾನ್‌ಬುಲ್‌ಗೆ 6,000 ಟನ್ ಉಪ್ಪನ್ನು ಹೊತ್ತೊಯ್ಯುತ್ತಿತ್ತು ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.

    8 ಈಜಿಪ್ಟ್​ ನಾಗರಿಕರು, ನಾಲ್ವರು ಭಾರತೀಯರು ಮತ್ತು ಇಬ್ಬರು ಸಿರಿಯಾ ಪ್ರಜೆ ಸೇರಿ 14 ಸಿಬ್ಬಂದಿ ಇದರಲ್ಲಿದ್ದರು. ಬೆಳಗ್ಗೆ 7 ಗಂಟೆಗೆ ಯಾಂತ್ರಿಕ ದೋಷದ ಕುರಿತು ನೌಕೆಯಿಂದ ಸಂಕೇತ ಬಂದಿತು. ಇದಾದ ಸ್ವಲ್ಪ ಸಮಯದ ನಂತರ ಲೆಸ್ಬೋಸ್‌ನ ನೈಋತ್ಯಕ್ಕೆ ಅಂದಾಜು 4 1/2 ನಾಟಿಕಲ್ ಮೈಲುಗಳಲ್ಲಿ (8 ಕಿಮೀ) ಹಡಗು ಕಣ್ಮರೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈಜಿಪ್ಟ್​ನ ಪ್ರಜೆಯೊಬ್ಬರನ್ನು ರಕ್ಷಿಸಲಾಗಿದೆ. ಎಂಟು ವ್ಯಾಪಾರಿ ಹಡಗುಗಳು, ಎರಡು ಹೆಲಿಕಾಪ್ಟರ್‌ಗಳು ಮತ್ತು ಒಂದು ಗ್ರೀಕ್ ನೌಕಾಪಡೆಯ ಬದುಕುಳಿದವರಿಗಾಗಿ ಹುಡುಕುತ್ತಿವೆ. ಈ ಪ್ರದೇಶದಲ್ಲಿ ಪ್ರತಿ ಗಂಟೆಗೆ 80 ಕಿಮೀ (50 mph) ವೇಗದಲ್ಲಿ ಗಾಳಿ ಬೀಸುತ್ತಿದೆ.

    ಮಾಜಿ ಪ್ರಧಾನಿ ಇಮ್ರಾನ್​ ವಿರುದ್ಧ ಆಘಾತಕಾರಿ ಆರೋಪ ಮಾಡಿದ ಪಾಕ್ ನಟಿ

    ಮೇಡ್ ಇನ್​ ಇಂಡಿಯಾ ಟೆಸ್ಲಾ ಇವಿ ಕಾರುಗಳು ಕೈಗೆಟಕುವ ಬೆಲೆಗೆ

    ಕರ್ನಾಟಕದ ಎರಡು ಐತಿಹಾಸಿ ತಾಣಗಳು ವಿಶ್ವ ಪರಂಪರೆ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಲು ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts