ಸಾವಿನ ನಂತರವೂ ಸಿಲ್ಕ್​ ಸ್ಮಿತಾಗೆ ಅವಮಾನ: ಆಕೆಯ ಬೆತ್ತಲೆ ದೇಹ ಮುಟ್ಟಲು ಅವರೆಲ್ಲ ಹಾತೊರೆಯುತ್ತಿದ್ರಂತೆ! Silk Smitha

Silk Smitha
Published on

Silk Smitha : ದಕ್ಷಿಣ ಭಾರತದ ಖ್ಯಾತ ನಟಿ ಸಿಲ್ಕ್ ಸ್ಮಿತಾ ಅವರು ಮರಣದ ನಂತರವೂ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ ಎಂದು ತಮಿಳು ಪತ್ರಕರ್ತ ಸಬಿತಾ ಜೋಸೆಫ್ ಬಹಿರಂಗಪಡಿಸಿದ್ದಾರೆ. ತಮಿಳು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಸ್ಫೋಟಕ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಏನೆಲ್ಲ ಅವಮಾನ ಎದುರಿಸಿದರು ಅಂತ ತಿಳಿದುಕೊಳ್ಳುವ ಮುನ್ನ ಸಿಲ್ಕ್​ ಸ್ಮಿತಾ ಬಗ್ಗೆ ಕಿರು ಪರಿಚಯ ಮಾಡಿಕೊಳ್ಳೋಣ. 80ರ ದಶಕದಲ್ಲಿ ಸಿಲ್ಕ್​ ಸ್ಮಿತಾ ಬಹುಬೇಡಿಕೆಯ ನಟಿಯಾಗಿದ್ದರು. ಹೆಚ್ಚಾಗಿ ಅವರು ಕಾಮಪ್ರಚೋದಕ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಐಟಂ ಸಾಂಗ್​ಗಳಿಗೆ ಹೆಚ್ಚಾಗಿ ಸೊಂಟ ಬಳುಕಿಸುತ್ತಿದ್ದರು. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಹೊಳೆಯುವ ಕಣ್ಣುಗಳು, ಸುವಾಸನೆಯ ಕೂದಲು ಮತ್ತು ದ್ರಾವಿಡ ಮೈಬಣ್ಣವು ಸಿಲ್ಕ್ ಸ್ಮಿತಾಳನ್ನು ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ದಿತು. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಅವರ ಆತ್ಮಹತ್ಯೆ ಸುದ್ದಿ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನುಂಟು ಮಾಡಿತು.

ನಾವೀಗ ಸಬಿತಾ ಜೋಸೆಫ್​ ಅವರು ಏನು ಹೇಳಿದರು ಅನ್ನೋದನ್ನು ನೋಡೋಣ. ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದ ನಂತರ ನಾನು ಅವರ ಮನೆಗೆ ಹೋಗಿದ್ದೆ. ಅವರು ಸೀರೆಯಲ್ಲಿ ನೇಣು ಹಾಕಿಕೊಂಡಿದ್ದಾರೆಂದು ನನಗೆ ತಿಳಿಯಿತು. ಸಾವಿನ ನಂತರವೂ ಅವರ ಮುಖ ತುಂಬಾ ಸುಂದರವಾಗಿತ್ತು. ನೇಣು ಹಾಕಿಕೊಳ್ಳುವವರ ನಾಲಿಗೆ ಹೊರಚಾಚಿರುತ್ತದೆ. ಆದರೆ ಸ್ಮಿತಾ ಸಾವು ಹಾಗಲ್ಲ. ನಿಮ್ಮ ಬಳಿ ಹಣವಿದ್ದರೆ, ನೀವು ಅದನ್ನು ಆತ್ಮಹತ್ಯೆಯನ್ನಾಗಿ ಮಾಡಬಹುದು ಎನ್ನುವ ಮೂಲಕ ಸಿಲ್ಕ್​ ಸ್ಮಿತಾ ಸಾವಿನ ಬಗ್ಗೆ ಜೋಸೆಫ್​ ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಶವವನ್ನು ಇರಿಸಿದಾಗ, ಅವರ ದೇಹದ ಮೇಲೆ ಒಂದೇ ಒಂದು ಬಟ್ಟೆಯೂ ಇರಲಿಲ್ಲ. ಈ ವೇಳೆ ನಾನು ಹೇಳಿದೆ, ಅವರು ತುಂಬಾ ದೊಡ್ಡ ನಟಿ, ಅವರನ್ನು ಈ ರೀತಿ ಅವಮಾನಿಸಬೇಡಿ, ಕನಿಷ್ಠ ಅವರ ದೇಹದ ಮೇಲೆ ಬಟ್ಟೆಯನ್ನಾದರೂ ಹಾಕಿ ಎಂದೆ. ಅಲ್ಲಿದ್ದ ಕೆಲವು ವಿಐಪಿಗಳು ಅವಳನ್ನು ಮುಟ್ಟಲು ಬಯಸಿದ್ದರು. ಬ್ಲಾಕ್​ ಟಿಕೆಟ್​ ಪಡೆದು ಸಿನಿಮಾ ನೋಡುವಂತೆ ಅವರನ್ನು ಮುಟ್ಟುವ ಅವಕಾಶವೂ ಅವರಿಗೆ ಸಿಕ್ಕಿತು ಎಂದು ಪತ್ರಕರ್ತ ಸ್ಫೋಟಕ ಸಂಗತಿಯನ್ನು ಬಹಿರಂಗಪಡಿಸಿದರು.

ಅಂದಹಾಗೆ ಸಿಲ್ಕ್ ಸ್ಮಿತಾ ಅಲಿಯಾಸ್ ವಿಜಯಲಕ್ಷ್ಮಿ ಆಂಧ್ರಪ್ರದೇಶದ ದೆಂಡ್ಲೂರು ಎಂಬ ಹಳ್ಳಿಯಲ್ಲಿ ಜನಿಸಿದರು. ಸಿಲ್ಕ್​ ಸ್ಮಿತಾ ಸಿನಿಮಾಗಳಲ್ಲಿ ಟಚ್ ಅಪ್ ಆರ್ಟಿಸ್ಟ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ನಟ ಮತ್ತು ನಿರ್ದೇಶಕ ವಿನು ಚಕ್ರವರ್ತಿ ಎವಿಎಂ ಸ್ಟುಡಿಯೋ ಬಳಿ ಸಿಲ್ಕಾ ಸ್ಮಿತಾ ಅವರನ್ನು ಭೇಟಿಯಾದಾಗ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಸಿಕ್ಕಿತು.

ಸ್ಮಿತಾ ಅವರಿಗೆ 1980ರಲ್ಲಿ ಚಲನಚಿತ್ರಗಳಲ್ಲಿ ಮೊದಲ ಅವಕಾಶ ಸಿಕ್ಕಿತು. ವಂಡಿಚಕ್ರ ಚಿತ್ರದಲ್ಲಿನ ಬಾರ್ ಗರ್ಲ್ 'ಸಿಲ್ಕ್' ಪಾತ್ರವು ಸ್ಮಿತಾ ಅವರ ಜೀವನವನ್ನು ಬದಲಾಯಿಸಿತು. ನಂತರ ದಕ್ಷಿಣ ಭಾರತದ ಸೌಂದರ್ಯ ರಾಣಿಯಾದ ಸ್ಮಿತಾ 1996 ರಲ್ಲಿ ತಮ್ಮ ಮೂವತ್ತಾರನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಈ ಸಾವಿಗೆ ನಿಜವಾದ ಕಾರಣ ಇಂದಿಗೂ ನಿಗೂಢವಾಗಿಯೇ ಉಳಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net