ನವದೆಹಲಿ: ಲಾಜಿಸ್ಟಿಕ್ಸ್ ಬೆಂಬಲ, ಗುಣಮಟ್ಟದ ಮೂಲಸೌಕರ್ಯ, ಉತ್ತಮ ರಸ್ತೆಗಳನ್ನು ಒದಗಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿದ್ದರೂ, ಬೆಂಗಳೂರಿನ ಸಿಲಿಕಾನ್ ವ್ಯಾಲಿ ರಾಜ್ಯ ಸರ್ಕಾರದ ನಿರಾಸಕ್ತಿಯಿಂದ ನರಳುತ್ತಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯೆಲ್ ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ವಿರುದ್ಧ ಕಿಡಿ ಕಾರಿದ್ದಾರೆ.
ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ ತುಮಕೂರಿನಲ್ಲಿ ಕೈಗಾರಿಕಾ ಟೌನ್‌ಶಿಪ್ ಅನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಬೆಂಬಲ ನೀಡುತ್ತಿದೆ. ವಾಸ್ತವದಲ್ಲಿ ಎಂಬಿ ಪಾಟೀಲ್ ಅವರು ಭಾರತದ ಪ್ರಗತಿಯನ್ನು ಅಪಹಾಸ್ಯ ಮಾಡುವ ಬದಲು ಅವರ ಕಾಂಗ್ರೆಸ್ ಸರ್ಕಾರ ತುಮಕೂರು ಕೈಗಾರಿಕಾ ಟೌನ್‌ಶಿಪ್ ಭಾರತದ ಪ್ರಗತಿಯನ್ನು ಅಪಹಾಸ್ಯ ಮಾಡುವ ತುಮಕೂರನ್ನು ಸಿಲಿಕಾನ್ ವ್ಯಾಲಿ ಮಾಡಲು ಪ್ರಯತ್ನಿಸಬೇಕು. ರಾಜ್ಯ ಸರ್ಕಾರದ ಹೊಣೆಗೇಡಿತನದಿಂದಾಗಿ ತುಮಕೂರು ಟೌನ್‌ಶಿಪ್ ಅತಂತ್ರ ಸ್ಥಿತಿಯಲ್ಲಿದೆ. ರಾಜ್ಯ ಜಮೀನಿನ ಸಮಸ್ಯೆಯನ್ನೂ ಪರಿಹರಿಸುತ್ತಿಲ್ಲ. ಈ ವಿಳಂಬ ಮತ್ತು ರಾಜ್ಯ ಸರ್ಕಾರದಿಂದ ಬೆಂಬಲದ ಕೊರತೆಯಿಂದಾಗಿ ಅನೇಕ ಹೂಡಿಕೆದಾರರು ಕರ್ನಾಟಕದಿಂದ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಗೋಯೆಲ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಹಣದ ವಿಚಾರಕ್ಕೆ ಸೆಕ್ಸ್ ವರ್ಕರ್ನನ್ನು ಬರ್ಬರವಾಗಿ ಕೊಂದ ಗ್ರಾಹಕ; ಆತ ಸಿಕ್ಕಿಬಿದ್ದಿದ್ದೆ ರೋಚಕ
ಕರ್ನಾಟಕ ಸರ್ಕಾರದ ಈ ಬೇಜವಾಬ್ದಾರಿತನದಿಂದಾಗಿ ಸಾವಿರಾರು ಉದ್ಯೋಗಗಳು ಮತ್ತು ಕೋಟಿಗಟ್ಟಲೆ ರೂಪಾಯಿ ಹೂಡಿಕೆಗಳು ರಾಜ್ಯದಿಂದ ದೂರವಾಗುತ್ತಿವೆ ಎಂದು ಗೋಯೆಲ್ ಹೇಳಿದ್ದಾರೆ. ಗುಜರಾತ್ ನ ಸೂರತ್ ನ ವಜ್ರೋದ್ಯಮ ವಜ್ರ ವ್ಯಾಪಾರಿಗಳನ್ನು ಸೆಳೆಯಲು ವಿಫಲವಾಗುತ್ತಿದೆ ಎಂಬ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಬೆಂಗಳೂರನ್ನು ಜಾಗತಿಕ ನಗರಿಯನ್ನಾಗಿ ಮಾಡಲು ಕೇಂದ್ರ ಇನ್ನಾದರೂ ಸಹಾಯಕ್ಕೆ ಬರಬೇಕು ಎಂದು ಕೇಂದ್ರ ವಾಣಿಜ್ಯ ಸಚಿವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.
ದೇಶದ ಪ್ರಧಾನಿ ಆಧುನಿಕ ನಗರ ಮೂಲಸೌಕರ್ಯವನ್ನು ನಿರ್ಮಿಸಲು ಸಮರ್ಥ ದೃಷ್ಟಿ ಮತ್ತು ಬದ್ಧತೆ ಹೊಂದಿದ್ದಾರೆ. ಆದರೆ ಕಾಂಗ್ರೆಸ್ ನಾಯಕತ್ವ, ದೇಶವನ್ನು ಮತ್ತು ಸಾಧನೆಗಳನ್ನು ವಿದೇಶಿ ನೆಲದಲ್ಲಿಯೂ ಸಹ ಅಪಹಾಸ್ಯ ಮಾಡುತ್ತದೆ. ಸ್ಮಾರ್ಟ್ ಸಿಟಿಗಳು ಮತ್ತು ಕೈಗಾರಿಕಾ ಟೌನ್‌ಶಿಪ್‌ಗಳನ್ನು ರಚಿಸುವುದು ವಿಕ್ಷಿತ್ ಭಾರತ್ 2047ರ ಗುರಿ. ನಮ್ಮ ಸರ್ಕಾರ ಆಧುನಿಕ ಸೌಲಭ್ಯಗಳು, ಉತ್ತಮ ಸಾಮಾಜಿಕ ಮೂಲಸೌಕರ್ಯಗಳನ್ನು ಒದಗಿಸಲು ಮತ್ತು ಕೈಗಾರಿಕೀಕರಣವನ್ನು ಉತ್ತೇಜಿಸಲು, ಹೂಡಿಕೆಗಳನ್ನು ಆಹ್ವಾನಿಸಲು ಮತ್ತು ಭಾರತದ ಯುವಕರಿಗೆ ಉದ್ಯೋಗಗಳನ್ನು ಒದಗಿಸಲು ಅವಿರತವಾಗಿ ಶ್ರಮಿಸುತ್ತಿದೆ ಎಂದು ವಿವರಿಸಿದ್ದಾರೆ.