VIDEO| ವಿಶ್ವದಲ್ಲೇ ಅತಿ ಉದ್ದದ ಕೂದಲು ಬೆಳೆಸಿ ಗಿನ್ನಿಸ್​ ದಾಖಲೆ ಬರೆದ ಬಾಲಕ

Guiness record
Published on

ಅಮೃತಸರ: ಅತಿ ಉದ್ದನೆಯ ಕೂದಲನ್ನು ಬೆಳೆಸುವ ಮೂಲಕ ಬಾಲಕನೋರ್ವ ಗಿನ್ನಿಸ್​ ದಾಖಲೆಯನ್ನು ಬರೆದಿದ್ದಾನೆ. ಪಂಜಾಬ್​ ಮೂಲದ ಸಿದ್ದಕ್​ದೀಪ್​ ಸಿಂಗ್​ ಚಹಲ್ ಈ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ.

ಸಿದ್ದಕ್​ದೀಪ್​ ಸಿಂಗ್​ ಚಹಲ್​ ಸಾಧನೆಯ ವಿಡಿಯೋವನ್ನು ಗಿನ್ನಿಸ್​ ವರ್ಲ್ಡ್​ ರೆಕಾರ್ಡ್​ ಸಂಸ್ಥೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಸುಮಾರು 4 ಅಡಿ 3 ಇಂಚು ಉದ್ದ ಕೂದಲು ಬೆಳೆದಿದ್ದು, ಸಿದ್ದಕ್​ದೀಪ್​ ಸಿಂಗ್​ ಕೇಶವನ್ನು ಸುಂದರವಾಗಿ ಕಾಪಾಡಿಕೊಂಡು ಬಂದಿದ್ದಾರೆ.

ಈ ಕುರಿತು ಮಾತನಾಡಿರುವ ಸಿದ್ದಕ್​ದೀಪ್​ ಸಿಂಗ್​ ಚಹಲ್​ ಜನರು ನನ್ನ ಕೂದಲನ್ನು ನೋಡಿ ತುಂಬಾ ಉದ್ದ ಹಾಗೂ ದಟ್ಟವಾಗಿದೆ ಎಂದು ಹೇಳುತ್ತಾರೆ. ಹಲವರು ನನ್ನ ಬಳಿ ಬಂದು ನಮಗೆ ಈ ರೀತಿಯ ಕೂದಲು ಬೆಳೆಯಬೇಕಿತ್ತು ಎಂದು ಅಸೂಯೆಯಿಂದ ಮಾತನಾಡಿದ್ದಾರೆ. ನನ್ನ ಕೂದಲು ಸುಮಾರು 130 ಸೆಂಟಿಮೀಟರ್​ ಅಥವಾ 4 ಅಡಿ ಉದ್ದ ಇರಬಹುದು.

ನಮ್ಮ ಧರ್ಮದ ನಾನು ನನ್ನ ಕೂದಲನ್ನು ಕತ್ತರಿಸದೆ ಹಾಗೆ ಬಿಟ್ಟಿದ್ದೇನೆ. ಎಂದಿಗೂ ನನಗೆ ಕೂದಲನ್ನೂ ಕತ್ತರಿಸಿಕೊರ್ಳಳಬೇಕೆಂಬ ಆಲೋಚನೆಯೂ ಸಹ ಬಂದಿಲ್ಲ. ದಿನದಿಂದ ದಿನಕ್ಕೆ ಕೂದಲು ಹೆಚ್ಚಾಗಿ ಬೆಳೆಯುತ್ತಾ ಹೋದಂತೆ ನಾನು ಕತ್ತರಿಸದೆ ಹಾಗೆಯೇ ಬಿಟ್ಟೆ. ಈಗ ಅದು ಗಿನ್ನಿಸ್​ ದಾಖಲೆಯಾಗಿರುವುದು ನನಗೆ ತುಂಬಾ ಸಂತೋಷವಾಗಿದೆ.

ನನ್ನ ಕೂದಲನ್ನು ತೊಳೆದು, ಒಣಗಿಸಿ ಕಟ್ಟಿಕೊಳ್ಳಲು ಸುಮಾರು ಒಂದು ಘಂಟೆ ಬೇಕಾಗುತ್ತದೆ. ಇದನ್ನೆಲ್ಲಾ ನನ್ನ ತಾಯಿ ಅವರೇ ಮಾಡುತ್ತಾರೆ. ಅವರಿಗೆ ಈ ಗೌರವ ಸಲ್ಲಬೇಕು. ಕೂದಲನ್ನು ಈ ರೀತಿ ಕಾಪಾಡಿಕೊಳ್ಳುವುದು ಕಠಿಣ ಕೆಲಸವಾದರೂ ಅದಕ್ಕೆ ತಕ್ಕ ಗೌರವ ದೊರೆತಿದೆ ಎಂದು ಸಿದ್ದಕ್​ದೀಪ್​ ಸಿಂಗ್​ ಚಹಲ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net