More

    168 ಇಲಿ ಹಿಡಿಯಲು 69.5 ಲಕ್ಷ ರೂಪಾಯಿ ವ್ಯಯಿಸಿದ ರೈಲ್ವೇ ಇಲಾಖೆ

    ಲಖನೌ: ಇಲ್ಲಿ ಹಿಡಿಯೋದು ದೊಡ್ಡ ವಿಷಯವೇನಲ್ಲ. ಹಾದಿಗೊಂದು ಬೀದಿಗೊಂದು ಇಲಿ ಸಿಗುತ್ತವೆ. ಒಂದು ಇಲಿ ಹಿಡಿಯಲು ಅಷ್ಟಾಗಿ ವೆಚ್ಚವಾಗುವುದಿಲ್ಲ. ಆದರೆ, ಉತ್ತರ ರೈಲ್ವೇ ಲಖನೌ ವಿಭಾಗದಲ್ಲಿ ಒಂದು ಇಲಿಯನ್ನು ಹಿಡಿಯಲು 41 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

    ಮಧ್ಯಪ್ರದೇಶದ ನೀಮಚ್ ಮೂಲದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಎಂಬುವವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ಲಖನೌ ವಿಭಾಗವು 2020 ಮತ್ತು 2022ರ ನಡುವೆ 168 ಇಲಿಗಳನ್ನು ಹಿಡಿಯಲು 69.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ತಿಳಿಸಿದೆ. ಅಂದರೆ ಪ್ರತಿ ಇಲಿಗೆ ಸುಮಾರು 41 ಸಾವಿರ ರೂ. ಖರ್ಚಾಗಿದೆ ಎಂದು ಲಖನೌ ವಿಭಾಗ ಆರ್‌ಟಿಐಗೆ ಉತ್ತರಿಸಿದೆ. ಇಲಿಗಳನ್ನು ಯಾರು ಹಿಡಿಯುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ರೈಲ್ವೇ ಮಂಡಳಿಯು ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್‌ ಎಂಬ ಸಂಸ್ಥೆಗೆ ಗುತ್ತಿಗೆ ನೀಡಿರುವುದಾಗಿ ತಿಳಿಸಿದೆ.

    ದಿಲ್ಲಿ, ಅಂಬಾಲಾ, ಮೊರಾದಾಬಾದ್, ಲಖನೌ ಮತ್ತು ಫಿರೋಜ್‌ಪುರ ಸೇರಿ ಐದು ವಿಭಾಗಗಳನ್ನು ಹೊಂದಿರುವ ಇಡೀ ಉತ್ತರ ರೈಲ್ವೇಯಲ್ಲಿ ಇಲಿಗಳನ್ನು ಹಿಡಿಯಲು ಎಷ್ಟು ದುಡ್ಡು ಖರ್ಚು ಮಾಡಲಾಗಿದೆ ಎಂಬ ವಿವರ ನೀಡುವಂತೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಆದರೆ, ಲಖನೌ ವಿಭಾಗ ಮಾತ್ರ ಚಂದ್ರಶೇಖರ್‌ ಗೌರ್‌ ಅವರಿಗೆ ಉತ್ತರ ನೀಡಿದೆ. ಫಿರೋಜ್‌ಪುರ ಮತ್ತು ಮೊರಾದಾಬಾದ್ ವಿಭಾಗಗಳು ಇನ್ನೂ ಉತ್ತರ ನೀಡಬೇಕಿದೆ. ಅಂಬಾಲಾ ಮತ್ತು ದಿಲ್ಲಿ ವಿಭಾಗಗಳು ಹಾರಿಕೆ ಉತ್ತರ ನೀಡಿ ನುಣುಚಿಕೊಂಡಿವೆ.

    rats

    ಇದನ್ನೂ ಓದಿ: VIDEO| ಗುಜರಾತ್​ನ ಖೇಡಾದಲ್ಲಿ ಶೋಭಯಾತ್ರೆ ವೇಳೆ ಕಲ್ಲು ತೂರಾಟ; ಪರಿಸ್ಥಿತಿ ಉದ್ವಿಗ್ನ

    ಚಂದ್ರಶೇಖರ್‌ ಗೌರ್ ಅವರು ಸಲ್ಲಿಸಿದ್ದ ಆರ್‌ಟಿಐನಲ್ಲಿ ಕೇವಲ ಇಲಿಗಳನ್ನು ಹಿಡಿಯುವುದಕ್ಕೆ ಎಷ್ಟು ಖರ್ಚು ಮಾಡುತ್ತೀರಿ ಎಂದು ಕೇಳಲಾಗಿದೆ. ಇಲಿಗಳಿಂದ ಉಂಟಾದ ಹಾನಿಯ ಮೌಲ್ಯವನ್ನು ಕೂಡ ಕೇಳಿದ್ದರು. ಆದರೆ, ಲಖನೌ ವಿಭಾಗವು ಈ ಬಗ್ಗೆ ಮಾಹಿತಿಯನ್ನು ನೀಡದೆ ಇಲಿಗಳಿಂದ ಹಾನಿಗೊಳಗಾದ ಸರಕುಗಳು ಮತ್ತು ವಸ್ತುಗಳಿಗೆ ವಿವರಗಳು ಲಭ್ಯವಿಲ್ಲ. ಹಾನಿಯ ಬಗ್ಗೆ ಯಾವುದೇ ಮೌಲ್ಯಮಾಪನ ಮಾಡಲಾಗಿಲ್ಲ ಎಂದು ಪ್ರತಿಕ್ರಿಯಿಸಿದೆ.

    ಅಂಬಾಲಾ ವಿಭಾಗವು ಏಪ್ರಿಲ್ 2020 ಮತ್ತು ಮಾರ್ಚ್ 2023ರ ನಡುವೆ ಕೀಟಗಳು, ಇಲಿಗಳು ಮತ್ತು ಧೂಮಪಾನದ ವಿರುದ್ಧ ಮಾಡಿದ ಕೆಲಸಕ್ಕೆ 39.3 ಲಕ್ಷ ರೂ.ಅನ್ನು ಖರ್ಚು ಮಾಡಿದೆ ಎಂದು ಹೇಳಿದೆ. ಆದರೆ, ಪ್ರತ್ಯೇಕ ವೆಚ್ಚಗಳು ಮತ್ತು ಇಲಿಗಳ ಸಂಖ್ಯೆಯನ್ನು ಅಂಬಾಲಾ ವಿಭಾಗ ತನ್ನ ಉತ್ತರದಲ್ಲಿ ಉಲ್ಲೇಖಿಸಿಲ್ಲ. ಮತ್ತೊಂದೆಡೆ, ದಿಲ್ಲಿ ವಿಭಾಗವು ತನ್ನ ಉತ್ತರದಲ್ಲಿ ಪ್ಯಾಸೆಂಜರ್‌ ರೈಲುಗಳಲ್ಲಿ ಕೀಟ ಮತ್ತು ಇಲಿಗಳ ನಿಯಂತ್ರಣಕ್ಕಾಗಿ ಸಂಸ್ಥೆಗೆ ಗುತ್ತಿಗೆ ನೀಡಿದ್ದೇವೆ ಎಂದು ಆರ್​ಟಿಐ ಅರ್ಜಿಗೆ ಉತ್ತರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts