ಹೆಬ್ರಿ: ದೇಶವನ್ನು ಬ್ರಿಟಿಷರ ಬಂಧನದಿಂದ ಮುಕ್ತಗೊಳಿಸಿ, ದೇಶವಾಸಿಗಳು ಸ್ವತಂತ್ರ ಚಳುವಳಿಯಲ್ಲಿ ಒಗ್ಗೂಡಿಸಲು ರಾಷ್ಟ್ರೀಯ ಗೀತೆ ಮಹತ್ವದ ಪಾತ್ರ ವಹಿಸಿದೆ ಎಂದು ರಾಷ್ಟ್ರೀಯ ಸ್ವಯಂಸೇವಾ ಸಂಘ ಕಾರ್ಯಕರ್ತ ಸುಧೀರ್ ನಾಯಕ್ ಹೆಬ್ರಿ ಹೇಳಿದರು.
ಹೆಬ್ರಿ ಅಮೃತ ಭಾರತಿ ವಿದ್ಯಾಲಯದಲ್ಲಿ ಶುಕ್ರವಾರ ವಂದೇ ಮಾತರಂ ರಾಷ್ಟ್ರಗೀತೆ 150ನೇ ವರ್ಷಾಚರಣೆಯಲ್ಲಿ ಮಾತನಾಡಿದರು. ಮುಖ್ಯ ಶಿಕ್ಷಕಿ ಶಕುಂತಳಾ ಉಪಸ್ಥಿತರಿದ್ದರು. ಸಮೀಕ್ಷಾ ಸ್ವಾಗತಿಸಿದರು. ಇಂಪನಾ ವಂದಿಸಿದರು.