ಉಡುಪಿ: ಸಮುದ್ರ ಕೊರೆತ ಸುನಾಮಿ ಮೊದಲಾದ ಅಪಾಯವನ್ನು ತಡೆಗಟ್ಟಲು ಅಧ್ಯಾತ್ಮದ ಮೊರಹೋಗುವ ಪ್ರಯತ್ನದ ಭಾಗವಾಗಿ ಕೇರಳದ ಕಣ್ಣೂರಿನಿಂದ ಉಡುಪಿಯ ಶಿರೂರಿನವರೆಗೆ ಸಮುದ್ರ ಕಿನಾರೆಯಲ್ಲಿ ಭಾನುವಾರ 108 ಕೇಂದ್ರಗಳಲ್ಲಿ ಏಕಕಾಲಕ್ಕೆ ಸುಮಾರು 25 ಸಾವಿರ ಜನರಿಂದ ಸಾಯಂಕಾಲ 4 ರಿಂದ 6ರವರೆಗೆ ಎರಡು ಗಂಟೆ ತಲಾ ಆರು ಬಾರಿ ವಿಷ್ಣುಸಹಸ್ರನಾಮಪಾರಾಯಣ ನಡೆಯಿತು.
ಹೆಜಮಾಡಿ, ಪಡುಬಿದ್ರಿ, ಕಾಪು, ಮಲ್ಪೆ, ಪಡುಕೆರೆ, ತೊಟ್ಟಂ, ಬೇಂಗ್ರೆ, ಕೋಡಿ, ಕೋಟೇಶ್ವರ, ತೆಕ್ಕಟ್ಟೆ, ಮಣೂರು, ಸಾಸ್ತಾನ, ನಾಗೂರು, ಕಿರಿಮಂಜೇಶ್ವರ, ಗಂಗೊಳ್ಳಿ, ಉಪು$್ಪಂದ, ಸೋಮೇಶ್ವರ, ಶಿರೂರು ಸೇರಿದಂತೆ 50ಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಸಾವಿರಾರು ಜನರು ಸ್ತೋತ್ರ ಪಠಿಸಿದರು. ಸಮುದ್ರರಾಜನಿಗೆ ಕ್ಷೀರಾಭಿಷೆೇಕ ಮಾಡುವ ಮೂಲಕ ಸಮುದ್ರಾಭಿಮುಖವಾಗಿ ಕುಳಿತು ಸ್ತೋತ್ರ ಪಠಣ ಆರಂಭವಾಯಿತು. ಶಾಂತಿ ಮಂತ್ರದೊಂದಿಗೆ ಮುಕ್ತಾಯವಾಯಿತು. ಸನಾತನ ಧರ್ಮ, ಗೋವಂಶದ ಮೇಲಿನ ಆಕ್ರಮಣಗಳ ಕೊನೆಗಾಣಲು ಒಕ್ಕೊರಳ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿ ಕಾರ್ಯಾಧ್ಯಕ್ಷ ಕಟ್ಕೆರೆ ಪ್ರೇಮಾನಂದ ಶೆಟ್ಟಿ , ಸಮಿತಿಯ ಅಧ್ಯಕ್ಷ ಶಶೀಂದ್ರ ಕುಮಾರ್, ಪ್ರಮುಖರಾದ ಅಣ್ಣಪ್ಪ ಕೋಟೇಶ್ವರ, ಪ್ರಶಾಂತ್ ಅಂಜಾರು, ರಶ್ಮಿರಾಜ್, ಸೋಂದಾ ಭಾಸ್ಕರ ಭಟ್ ಮೊದಲಾದವರು ಉಪಸ್ಥಿತರಿದ್ದರು.