ವೈರಲ್​ ಆಯ್ತು ನಟ-ನಿರ್ದೇಶಕ ನಡುವಿನ ಲಿಪ್​ಲಾಕ್​ ಫೋಟೋ: ನೆಟ್ಟಿಗರಿಂದ ತೂರಿಬಂತು ಶಾಕಿಂಗ್​ ಪ್ರಶ್ನೆ!

Viral Photo
Published on

ಹೈದರಾಬಾದ್​: ತೆಲುಗು ನಟ ಸಿಧು ಜೊನ್ನಲಗದ್ದ ನಟನೆಯ "ಕೃಷ್ಣ ಆ್ಯಂಡ್​ ಹಿಸ್​ ಲೀಲಾ" ಚಿತ್ರವನ್ನು ರವಿಕಾಂತ್​ ಪೆರೆಪು ಅವರು ನಿರ್ದೇಶಿಸಿದ್ದಾರೆ. ಜೂನ್​ 1ರಂದು ಚಿತ್ರವನ್ನು ಬೆಳ್ಳಿತೆರೆಯ ಮೇಲೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಮಹಾಮಾರಿ ಕರೊನಾ ವೈರಸ್​ ಲಾಕ್​ಡೌನ್​ನಿಂದಾಗಿ ಚಿತ್ರತಂಡ ಜೂನ್​ 25ರಂದು ಓಟಿಟಿ ಪ್ಲ್ಯಾಟ್​ಫಾರ್ಮ್ ನೆಟ್​ಫ್ಲಿಕ್ಸ್​ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದೆ.

ಕನ್ನಡತಿ ಶ್ರದ್ಧಾ ಶ್ರೀನಾಥ್​ ನಾಯಕಿಯಾಗಿ ಅಭಿನಯಿಸಿರುವ ತೆಲುಗು ರೊಮ್ಯಾಂಟಿಕ್​ ಡ್ರಾಮಾದಲ್ಲಿ ಸೀರತ್​ ಕಪೂರ್​ ಮತ್ತು ಶಾಲಿನಿ ವಾದ್ನಿಕಟ್ಟಿ ಸಹ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆಗಿರುವ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಇದೇ ಖುಷಿಯಲ್ಲಿ ಚಿತ್ರ ನಿರ್ದೇಶಕ ರವಿಕಾಂತ್​ ಪೆರೆಪು ಹಾಗೂ ನಟ ಸಿಧು ಜೊನ್ನಲಗದ್ದ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಿದ್ದಾರೆ.

ಚಿತ್ರದಲ್ಲಿ ಸಹ ಬರಹಗಾರರಾಗಿರುವ ಸಿಧು 2017ರಿಂದಲೂ ನಿರ್ದೇಶಕರೊಂದಿಗೆ ಸ್ಕ್ರಿಪ್ಟ್​ ಬರಹದಲ್ಲಿ ತೊಡಗಿಸಿಕೊಂಡಿದ್ದಾರೆ. ನೆಟ್​ಫ್ಲಿಕ್ಸ್​ನಲ್ಲಿ ಚಿತ್ರ ಬಿಡುಗಡೆ ಮಾಡಿದ ಬೆನ್ನಲ್ಲೇ ಇಬ್ಬರು ಪರಸ್ಪರ ಲಿಪ್​ ಕಿಸ್​ ಮಾಡುತ್ತಿರುವ ಚಿತ್ರವನ್ನು ಸಿಧು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡು, ಕೃಷ್ಣ ಆ್ಯಂಡ್​ ಹಿಸ್​ ಲೀಲಾ. ಆಲ್​ ಯುವರ್ಸ್​ ಮೈಕ್​ ಡ್ರಾಪ್​ (ನಿಮ್ಮೆಲ್ಲರ, ಮೈಕ್ ಕೆಳಗಿಡಿ) ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ಮತ್ತು ನಟ ಚುಂಬಿಸುತ್ತಿರುವ ಫೋಟೋ ಅಪ್​ಲೋಡ್​ ಮಾಡಿದ ಕೆಲವೇ ಕ್ಷಣಗಳಲ್ಲಿ ವೈರಲ್​ ಆಗಿದ್ದು, ಇದೀಗ ಇನ್​​ಸ್ಟಾಗ್ರಾಂನಲ್ಲಿ ನಟ ಫಾಲೋವರ್ಸ್​ಗಳು ಪ್ರಶ್ನೆಗಳ ಮಳೆಗೈದಿದ್ದಾರೆ. ಇಬ್ಬರ ಲೈಂಗಿಕ ದೃಷ್ಟಿಕೋನದ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ, ಇದಕ್ಕೆ ಈ ಪ್ರಶ್ನೆಗೆ ಈವರೆಗೆ ನಟನಿಂದ ಪ್ರತಿಕ್ರಿಯೆ ಬಂದಿಲ್ಲ. ಅಭಿಮಾನಿಗಳು ಉತ್ತರಕ್ಕಾಗಿ ಎದುರು ನೋಡುತ್ತಿದ್ದಾರೆ.

ಕೃಷ್ಣ ಆ್ಯಂಡ್​ ಹಿಸ್​ ಲೀಲಾ ಚಿತ್ರವನ್ನು ಬಾಹುಬಲಿ ಖ್ಯಾತಿಕ ರಾಣಾ ದಗ್ಗುಬಾಟಿ ಅವರ ಸುರೇಶ್​ ಪ್ರೊಡಕ್ಷನ್​, ವೆಯಾಕೋಮ್​ 18 ಮತ್ತು ಸಂಜಯ್​ ರೆಡ್ಡಿ ಸಹಯೋಗದಲ್ಲಿ ನಿರ್ಮಿಸಿದೆ. ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net