ಮಾಜಿ ಸಿಎಂ ಸಿದ್ದುಗಾಗಿ ಹೊಲ ಮಾರಿ ಕೋಟಿ ರೂ. ಹಣ ಕೊಡುತ್ತೇನೆ ಎಂದ ಅಭಿಮಾನಿ!

11
Published on

ವಿಜಯನಗರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಇಳಿಯುವುದು ಎನ್ನುವ ವಿಚಾರ ಅಭಿಮಾನಿಗಳಲ್ಲಿ ಮಾತ್ರ ಇನ್ನೂ ಜೀವಂತವಾಗಿಯೇ ಇದೆ. ಈಗಾಗಲೇ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವೆ ಎಂದು ಹೇಳಿಕೆ ನೀಡಿದ್ದರು.

ಇದೀಗ ಅಭಿಮಾನಿ ಒಬ್ಬರು, ಸಿದ್ದರಾಮಯ್ಯಗಾಗಿ ಹೊಲ ಮಾರಾಟ ಮಾಡಿ ಕೋಟಿ ರೂಪಾಯಿ ಹಣ ಕೊಡುತ್ತೇನೆ ಎಂದಿದ್ದು ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದಾರೆ. ಸಿದ್ದರಾಮಯ್ಯಗೆ ನಮ್ಮ ಕ್ಷೇತ್ರದಿಂದ ಸ್ಪರ್ಧಿಸಿ ಎನ್ನುವ ಅಭಿಮಾನಿಗಳ ಸಂಖ್ಯೆ ಮಾತ್ರ ಕಮ್ಮಿ ಆಗುತ್ತಿಲ್ಲ.

ಇಲ್ಲೊಬ್ಬ ಸಿದ್ದು ಅಭಿಮಾನಿ, ಹೊಸಪೇಟೆ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ತನ್ನ ಆರು ಎಕರೆ ಹೊಲದಲ್ಲಿ ಎರಡು ಎಕರೆ ಮಾರಾಟ ಮಾಡಿ ಒಂದು ಕೋಟಿ ರೂಪಾಯಿ ದೇಣಿಗೆ ಕೊಡುತ್ತೇನೆ ಎಂದು ಮಲಿಯಪ್ಪ ಎನ್ನುವವರು ಹೇಳಿದ್ದಾರೆ.

ವಿಜಯನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಖಂಡಿತ ಗೆಲುವು ಹೀಗಾಗಿ ಹಣ ಹೊಂದಿಸಿ‌ಕೊಡುತ್ತೇನೆ ಎಂದು ಅಭಿಮಾನಿ ಮಲಿಯಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭರ್ಜರಿ ಆಫರ್ ನೀಡಿರುವ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ಕೆ.ಎಸ್. ಮಲಿಯಪ್ಪ ಅವರು 'ಗಾದಿಗನೂರು ಗ್ರಾಮದ ಗೋನಾಳ ಬಳಿ ನನಗೆ ಆರು ಎಕರೆ ಜಮೀನು ಇದೆ. ಈ ಪೈಕಿ ಎರಡು ಎಕರೆ ಜಮೀನು ಮಾರಾಟ ಮಾಡಿ, ಸಿದ್ದರಾಮಯ್ಯ ಅವರಿಗೆ ಕೊಡುತ್ತೇನೆ. ಒಂದು ಎಕರೆಗೆ ಐವತ್ತು ಲಕ್ಷಕ್ಕೂ ಹೆಚ್ಚು ಹಣ ಬರುತ್ತದೆ. ಹೀಗಾಗಿ ಎರಡು ಎಕರೆ ಮಾರಾಟ ಮಾಡಿ ಒಂದು ಕೋಟಿ ಕೋಡುತ್ತೇನೆ' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net