ವಯನಾಡಿನಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾದ್ರು ಸಿದ್ದಿಕ್​ ಕಪ್ಪನ್​ ಪತ್ನಿ

Siddique Kappan's wife meets Rahul Gandhi
Published on

ವಯನಾಡ್​: ಹಾಥರಸ್ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯ ಮನೆಗೆ ಹೋಗಲೆತ್ನಿಸಿದ್ದ ಪತ್ರಕರ್ತ ಸಿದ್ದಿಕ್​ ಕಪ್ಪನ್​ ಮತ್ತು ಮೂವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನ ಅವಧಿ ಎರಡನೇ ಬಾರಿ ನವೆಂಬರ್ 2 ರ ತನಕ ವಿಸ್ತರಣೆಯಾಗಿದೆ. ಈ ನಡುವೆ, ಕಪ್ಪನ್​ ಬಿಡುಗಡೆಗೆ ಆಗ್ರಹಿಸಿದ್ದ ಸಂಸದ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಕಪ್ಪನ್ ಪತ್ನಿ ರೈಹನತ್​ ನ್ಯಾಯ ದೊರಕಿಸಿಕೊಡುವಂತೆ ಮನವಿ ಸಲ್ಲಿಸಿದರು.

ಕಲ್ಪೆಟ್ಟಾ ಗೆಸ್ಟ್​ ಹೌಸ್​ನಲ್ಲಿದ್ದ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ರೈಹನತ್​, ನಮಗೆ ನ್ಯಾಯ ದೊರಕುವ ವಿಶ್ವಾಸವಿದೆ. ಕಪ್ಪನ್ ವಿರುದ್ಧ ಇನ್ನಷ್ಟು ಆರೋಪಗಳನ್ನು ಹೊರಿಸಿದರೆ ಎಂಬ ಆತಂಕ ನಮಗಿದೆ. ಬಂಧನದ ಬಳಿಕ ಅವರನ್ನು ಸಂಪರ್ಕಿಸುವುದು ಸಾಧ್ಯವಾಗಿಲ್ಲ. ವಕೀಲರಿಗೂ ಸಂಪರ್ಕ ಸಾಧ್ಯವಾಗಿಲ್ಲ ಎಂದು ಹೇಳಿದರು.

ಸ್ವಕ್ಷೇತ್ರವಾಗಿರುವ ವಯನಾಡಿನಲ್ಲಿ ಸಂಸದ ರಾಹುಲ್ ಗಾಂಧಿ ಮೂರು ದಿನಗಳಿಂದ ತಂಗಿದ್ದು, ಕ್ಷೇತ್ರ ಕಾರ್ಯಗಳತ್ತ ಗಮನಹರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net