ಮುಂಬೈ: ನಟಿ ಅದಿತಿ ರಾವ್ ಹೈದರಿ ಮತ್ತು ಟಾಲಿವುಡ್ ನಟ ಸಿದ್ಧಾರ್ಥ್ ಅವರ ಸಂಬಂಧದ ಬಗ್ಗೆ ವದಂತಿಗಳು ಹಬ್ಬಿದ್ದವು, ಈ ಜೋಡಿ ಅಂತಿಮವಾಗಿ ತಮ್ಮ ಡೇಟಿಂಗ್ ಅನ್ನು ಸೋಶಿಯಲ್ ಮೀಡಿಯಾ ಮೂಲಕ ಅಧಿಕೃತಗೊಳಿಸಿದೆ.
ಅದಿತಿ ರಾವ್ ಹೈದರಿ ಜತೆ ಸಿದ್ದಾರ್ಥ್ ಅವರ ಓಡಾಟ ಇತ್ತೀಚೆಗೆ ಜೋರಾಗಿದೆ. ಹಲವು ತಿಂಗಳಿಂದ ನಟ ಸಿದ್ಧಾರ್ಥ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ತಾವಿಬ್ಬರೂ ಪ್ರೇಮಿಗಳು ಎಂದು ಈ ಜೋಡಿ ಎಂದಿಗೂ ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ನಟಿ ಅದಿತಿ ರಾವ್ ಹೈದರಿ ಅವರು 36ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ, ಸಿದ್ಧಾರ್ಥ್ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ಇಬ್ಬರ ನಡುವೆ ಇರುವ ಪ್ರೀತಿಯನ್ನು ಖಚಿತ ಪಡಿಸಿದ್ದಾರೆ.
“ಅವಳು ಸುಂದರವಾಗಿಲ್ಲವೇ? ಜನ್ಮದಿನದ ಶುಭಾಶಯಗಳು. ಸಂಗಾತಿಯಾಗಿದ್ದಕ್ಕಾಗಿ ಧನ್ಯವಾದಗಳು. ಎಲ್ಲರೂ ಕಾಯುತ್ತಿದ್ದಾರೆ ನಿಮ್ಮ ಮುಖದ ಮೇಲೆ ನಗು ನೋಡಲು, ನೀವು ಹೀಗೆ ಇರಿ ಯಾವಾಗಲೂ..ಮತ್ತು ಧನ್ಯವಾದಗಳು..ತುಂಬಾ ಸಮಯವಾಗಿದೆ, ನಾನು ನಿಮ್ಮನ್ನು ಬೇಗ ನೋಡುತ್ತೇನೆ ಎಂದು ಸಿದ್ಧಾರ್ಥ್ ಬರೆದುಕೊಂಡು ಅದಿತಿ ರಾವ್ ಅವರ ಫೋಟೋವನ್ನು ಶೇರ್ ಮಾಡಿ, ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ. ಅದಿತಿ ರಾವ್ ಹೈದರಿ, ಕಾಮೆಂಟ್‌ಗಳ ವಿಭಾಗದಲ್ಲಿ ಪೋಸ್ಟ್‌ಗೆ ಪ್ರತ್ಯುತ್ತರಿಸಿದ್ದಾರೆ, “ತುಂಬಾ ಚೆನ್ನಾಗಿದೆ… ನೀವು ಕವಿ..ಇದು ನನಗೆ ತಿಳಿದಿರಲಿಲ್ಲ! ಎಂದು ಕಾಮೆಂಟ್ ಮಾಡಿದ್ದಾರೆ . ಆದಷ್ಟು ಬೇಗ ಈ ಪ್ರೇಮಿಗಳು ಮದುವೆ ಆಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಬಾಲಿವುಡ್ನಲ್ಲಿ ಮತ್ತು ದಕ್ಷಿಣ ಭಾರತದಲ್ಲಿ ಅದಿತಿ ರಾವ್ ಹೈದರಿ ಅವರು ಗುರುತಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಅನೇಕ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ಅದಿತಿ ಹಿಂದಿ ಮಾತ್ರವಲ್ಲದೇ ಇಂಗ್ಲಿಷ್ ಸಿನಿಮಾಗಳಿಂದಲೂ ಅವರಿಗೆ ಆಫರ್ ಬರುತ್ತಿದೆ. ವೆಬ್ ಸೀರಿಸ್ಗಳಲ್ಲೂ ಅವರು ನಟಿಸುತ್ತಿದ್ದಾರೆ.
ಈ ಮೊದಲು ಅದಿತಿ ರಾವ್ ಹೈದರಿ ಅವರು ನಟ ಸತ್ಯದೀಪ್ ಮಿಶ್ರಾ ಜೊತೆ ಮದುವೆ ಆಗಿದ್ದರು. ಆದರೆ 2013ರಲ್ಲಿ ಅವರು ವಿಚ್ಛೇದನ ಪಡೆದರು. ಅದೇ ರೀತಿ, ಸಿದ್ದಾರ್ಥ್ ಕೂಡ ಮೇಘನಾ ನಾರಾಯಣ್ ಜೊತೆ 2003ರಲ್ಲಿ ಮದುವೆಯಾಗಿ 2007ರಲ್ಲಿ ಡಿವೋರ್ಸ್ ಪಡೆದರು. ಈಗ ಅದಿತಿ ರಾವ್ ಹೈದರಿ ಜೊತೆ ಸಿದ್ದಾರ್ಥ್ ಅವರ ಓಡಾಟ ಜೋರಾಗಿದೆ. ಶೀಘ್ರದಲ್ಲೇ ಈ ಜೋಡಿಯಿಂದ ಮದುವೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಹೊರಬರಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರರಂಗದಲ್ಲಿ ಇಬ್ಬರೂ ಬ್ಯುಸಿ ಆಗಿದ್ದಾರೆ.