ಬರುತ್ತಿದ್ದಾರೆ ಲಕ್ಷೋಪಲಕ್ಷ ಜನ; ನಾಳೆ ಬೆಳಗ್ಗೆವರೆಗೂ ಮುಂದುವರೆಯುವುದೇ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ?

WhatsApp Image 2023-01-03 at 5.21.39 PM
Published on

ವಿಜಯಪುರ: ಸಿದ್ದೇಶ್ವರ ಶ್ರೀಗಳ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಕಾರಣಕ್ಕೆ, ಇಂದು ಸಂಜೆಗೆ ಅಂತಿಮಗೊಳ್ಳಬೇಕಿದ್ದ ಅಂತಿಮ ದರ್ಶನದ ವ್ಯವಸ್ಥೆಯನ್ನು ನಾಳೆವರೆಗೆ ಮುಂದುವರಿಸಲಾಗುವುದೇ? ಇಂಥದೊಂದು ಪ್ರಶ್ನೆ ಭಕ್ತರನ್ನು ಕಾಡುತ್ತಿದೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ, 'ಪರಮಪೂಜ್ಯರ ದರ್ಶನಕ್ಕೆ ತಂಡೋಪತಂಡವಾಗಿ ಭಕ್ತರ ಆಗಮನದ ಕಾರಣಕ್ಕೆ, ಇಂದು ಸಂಜೆ 4 ಗಂಟೆಗೆ ಮುಗಿಯಬೇಕಿದ್ದ ದರ್ಶನ ಕಾರ್ಯವನ್ನು ಮುಂದುವರಿಸಬೇಕಾಗುತ್ತದೆ... ಎಷ್ಟೇ ತಡವಾದರೂ ಚಿಂತೆಯಿಲ್ಲ, ಎಲ್ಲ ಸದ್ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ, ಯಾರೂ ಆತಂಕ ಪಡುವುದು ಬೇಡ, ಚಿಂತೆ ಬೇಡ...' ಎಂದು ವಿನಂತಿಸಿಕೊಂಡಿದ್ದಾರೆ.

'ಭಕ್ತರು ತಮ್ಮ ತಮ್ಮ ಸ್ಥಳಗಳಿಂದಲೇ ಮಾಧ್ಯಮದ ಮೂಲಕ ದರ್ಶನ ಪಡೆದುಕೊಳ್ಳಬಹುದು, ಇಲ್ಲಿಗೆ ಬಂದ ಭಕ್ತರಿಗೆ ನಿರಾಸೆಯಾಗುವುದಿಲ್ಲ, ನೂಕುನುಗ್ಗಲಿಗೆ ಅವಕಾಶ ಕೊಡದೆ, ಶಾಂತಿಯಿಂದ, ಭಕ್ತಿಯಿಂದ ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಿ...' ಎಂದು ಶ್ರೀ ವಚನಾನಂದ ಸ್ವಾಮೀಜಿ ಕರೆ ಕೊಟ್ಟಿದ್ದಾರೆ.

ವಿಶ್ವಸನೀಯ ಮೂಲಗಳ ಪ್ರಕಾರ, ಸದ್ಯಕ್ಕೆ ಶ್ರೀಗಳ ಅಂತಿಮ ಮೆರವಣಿಗೆ ಆರಂಭವಾಗಿದ್ದು, ಆಶ್ರಮ ತಲುಪಿದ ನಂತರ ಅಲ್ಲಿ ಸಾವಿರ ಜನರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಲಿದೆ, ಸರಿಸುಮಾರು 8 ಗಂಟೆಯಿಂದ 9 ಗಂಟೆ ಆಗಬಹುದು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net