ಗೋಹತ್ಯೆ ನಿಷೇಧ ಕಾಯ್ದೆ ತಂದಿದ್ದೇ ನಾನ್ ಕರೆಕ್ಟ್; ಗ್ರೌಂಡ್ ರಿಯಾಲಿಟಿ ಏನಾಗಿದೆ ಗೊತ್ತಿದ್ಯಾ?

#Siddaramaiah
Published on

ಬೆಂಗಳೂರು: ಗೋ‌ಹತ್ಯೆ ನಿಷೇಧ ಕಾಯ್ದೆಯಿಂದರೈತರಿಗೆ ನಷ್ಟವಾಗುತ್ತಿದೆ. ವಯಸ್ಸಾದ ರಾಸುಗಳನ್ನು ಕಾಡಿಗೆ ಬಿಡುತ್ತಿದ್ದಾರೆ. ಗೋ ಶಾಲೆಗಳನ್ನು ಸಮರ್ಪಕವಾಗಿ ನಿರ್ಮಾಣ ಮಾಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭಾ ಅಧಿವೇಶನದಲ್ಲಿ ಹೇಳಿದರು.

ರೈತರಿಗೆ ಅನುಪಯುಕ್ತ ದನಗಳನ್ನು ಸಾಕುವುದು ಕಷ್ಟವಾಗುತ್ತಿದೆ. ಗೋ ರಕ್ಷಣೆ ಮಾಡಿದ್ದೇವೆ ಎಂದು ಬೆನ್ನು ತಟ್ಟೋದು ಬೇರೆ. ಗೋ ಹತ್ಯಾ ನಿಷೇಧದ ಬಳಿಕೆ ವಾಸ್ತವವಾಗಿ ಏನೆಲ್ಲಾ ಸಮಸ್ಯೆಗಳಾಗುತ್ತಿವೆ ಎಂಬುದು ಗೊತ್ತಿದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಗೋಹತ್ಯೆ ನಿಷೇಧ ಕಾಯ್ದೆ ತಂದಿದ್ದೇ ನಾನ್ ಕರೆಕ್ಟ್. ನಾನು ಪಶುಸಂಗೋಪನಾ ಇಲಾಖೆಗೆ ಪ್ರಶ್ನೆ ಕೇಳಿದ್ದೆ. 2019 ರಲ್ಲಿ 1 ಕೋಟಿ 29 ಲಕ್ಷ ರಾಸುಗಳು ಇವೆ ಅಂದಿದ್ದರು. 2020ರಲ್ಲಿ ಮತ್ತೆ ಉತ್ತರಿಸುತ್ತಾ, 1 ಕೋಟಿ 14 ಲಕ್ಷ ರಾಸುಗಳಿವೆ ಎಂದು ಹೇಳಿದ್ದಾರೆ. ಒಂದೇ ವರ್ಷದಲ್ಲಿ 13 ಲಕ್ಷ ದನಗಳು ಕಣ್ಮರೆಯಾದವಾ? ಅತ್ಯಂತ ಕಡಿಮೆ ಸಮಯದಲ್ಲಿ ಇಷ್ಟೊಂದು ದನಗಳ ಸಂಖ್ಯೆ ಕಡಿಮೆಯಾಗಲು ಕಾರಣವೇನು ಎಂದು ಸರ್ಕಾರವನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net