ನಮ್ಮ ದೇವರಿಗೆ ನಮಸ್ತೆ... ಅಂದ ಮುನಿರತ್ನ! ವಿಧಾನಸೌಧದಲ್ಲಿ ಗುರು-ಶಿಷ್ಯ ಮುಖಾಮುಖಿ ಮಾತುಕತೆ

siddaramaia muniratna
Published on

ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಆರಂಭವಾದ ಮೊದಲ ದಿನವಾದ ಸೋಮವಾರ ಗುರು-ಶಿಷ್ಯರು ಮುಖಾಮುಖಿಯಾಗಿ ಕೆಲಕಾಲ ಚರ್ಚಿಸಿದ್ದು ಇತರರನ್ನು ಗಮನ ಸೆಳೆಯಿತು. ವಿಧಾನಸೌದದ ಮೊಗಸಾಲೆಯ ಕ್ಯಾಂಟೀನ್​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಆರ್​.ಆರ್.ನಗರ ಕ್ಷೇತ್ರದ ಶಾಸಕ ಮುನಿರತ್ನರ ಮಾತಿನ ಲಹರಿ ಹೀಗಿತ್ತು.

ಮುನಿರತ್ನ: ನಮ್ಮ ದೇವರಿಗೆ ನಮಸ್ತೆ...

ಸಿದ್ದರಾಮಯ್ಯ: ಏನಪ್ಪ ಮಂತ್ರಿ ಯಾವಾಗ ಆಗೋದು? ಬಾ ಕಾಫಿ ಕುಡಿಯೋಣ...(ಪಕ್ಕಕ್ಕೆ ಮುನಿರತ್ನರನ್ನು ಕೂರಿಸಿಕೊಂಡರು)

ಮುನಿರತ್ನ: ಮುಖ್ಯಮಂತ್ರಿ ಅವರು ಮಾಡಿದಾಗ

ಸಿದ್ದರಾಮಯ್ಯ: ನಿನಗೆ ಬೇಗ ಆಗಬೇಕು ಅಂತ ಆಸೆ ಇಲ್ವೇ?

ಮುನಿರತ್ನ: ನನ್ನ ಜೀವನದ ಅಕೌಂಟ್​ನಲ್ಲಿ ಮಿನಿಸ್ಟರ್ ಆಗಬೇಕು ಅಂತ ಬರೆದಿದ್ರೆ ಲಾಕ್ ಒಪನ್ ಆಗುತ್ತೆ. ನಾನು ಮಾಡಿ ಅಂತ ಒತ್ತಾಯ ಮಾಡಲ್ಲ

ಸಿದ್ದರಾಮಯ್ಯ: ಮಾತು ಕಲ್ತಿದ್ದೀಯಾ.. ಸರಿ ಅಷ್ಟು ಲೀಡ್ ಹೇಗೆ ಬಂತು?

ಮುನಿರತ್ನ: ಕಾಂಗ್ರೆಸ್ ತಂತ್ರಗಾರಿಕೆ ಕಾರಣ

ಸಿದ್ದರಾಮಯ್ಯ: ಸುಮ್ಮನಿರು ನಾನು ಸಿಎಂ ಆಗಿದ್ದಾಗ ಕೊಟ್ಟ ಅನುದಾನ...

ಮುನಿರತ್ನ: ಅದರಲ್ಲಿ ನನ್ನ ತಕರಾರು ಇಲ್ಲ. ನೀವು ಕೊಟ್ಟ ಅನುದಾನ ನಾನು ಮರೆಯಲ್ಲ...

ಸಿದ್ದರಾಮಯ್ಯ: ಸರಿ ಒಳ್ಳೆಯದಾಗ್ಲಿ.. ಬೇಗ ಮಿನಿಸ್ಟರ್ ಆಗು

ಮುನಿರತ್ನ: ಅದು ಯಡಿಯೂರಪ್ಪ ಕೃಪೆ ತೋರಿಸಿದ್ರೆ ಆಗುತ್ತೆ ಸರ್. ಸದ್ಯ ನಾನು ಶಾಸಕನಾಗಿ ಕೆಲಸ ಮಾಡ್ತೀನಿ

ಸಿದ್ದರಾಮಯ್ಯ: ಸೋಮಶೇಖರ್, ಬೈರತಿ ಆಗಿದ್ದಾರೆ ನೀನು ಬೇಗ ಆಗು

ಮುನಿರತ್ನ: ಅದು ಸಿಎಂ ಕೈಯಲ್ಲಿದೆ ಸರ್

ಗುರು-ಶಿಷ್ಯರ ಮಾತುಕತೆ ವೇಳೆ ಯು.ಟಿ. ಖಾದರ್, ರಾಮಲಿಂಗಾರೆಡ್ಡಿ, ನಾರಾಯಣಸ್ವಾಮಿ, ಈಶ್ವರ್ ಖಂಡ್ರೆ ಕೂಡ ಉಪಸ್ಥಿತರಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net