More

    VIDEO | ಅಜ್ಜಿಯನ್ನು ಪ್ಯಾರಿಸ್ ಪ್ರವಾಸಕ್ಕೆ ಕರೆದೊಯ್ದ ಮೊಮ್ಮಕ್ಕಳು

    ಅಮೆರಿಕಾ: ಚಿಕ್ಕವರಿದ್ದಾಗ ಅಜ್ಜಿ ಹೇಳಿದ ಕಥೆ ನೆನಪು ಇದ್ಯಾ? ಅಜ್ಜಿ ಕಥೆ, ಕೈ ರುಚಿ, ಅಜ್ಜಿ ಮನೆ ಹೀಗೆ ಚಿಕ್ಕ ವಯಸ್ಸಿನಲ್ಲಿ ಕಳೆದ ಸಿಹಿ ನೆನಪುಗಳು ಅಪಾರ. ಹೀಗೆ ಅಜ್ಜಿಯ ಪ್ರೀತಿ ಅಕ್ಕರೆಯಲ್ಲಿ ಬೆಳೆದ ಇಬ್ಬರು ಮೊಮ್ಮಕ್ಕಳು ತಮ್ಮ ಅಜ್ಜಿಯನ್ನು ಫಾರಿನ್ ಕರೆದುಕೊಂಡು ಹೋಗಿ ಸರ್‌ಪ್ರೈಸ್ ನೀಡಿದ್ದಾರೆ.

    ಯುಕೆಯಲ್ಲಿ ನೆಲೆಸಿದ್ದು, ದಂತವೈದ್ಯರಾಗಿ ಕೆಲಸ ಮಾಡುತ್ತಿರುವ ಸಹೋದರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
    ನಮ್ಮ ಅಜ್ಜಿ ನಮ್ಮನ್ನು ಬೆಳೆಸಲು ಸಾಕಷ್ಟು ಕಷ್ಟಪಟ್ಟಿದ್ದರು. ಆದ್ದರಿಂದ, ಅವರು ಜೀವನದಲ್ಲಿ ಅತ್ಯಂತ ಹೆಚ್ಚು ಖುಷಿಯನ್ನು ನೋಡಬೇಕೆಂದು ನಾವು ಬಯಸಿದ್ದೆವು. ಅಜ್ಜಿಯನ್ನು ಪ್ಯಾರಿಸ್ ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಿದೇವು ಎಂದು ಬರೆದು ಕೊಂಡು ಅಜ್ಜಿಯ ಪ್ರವಾಸದ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

    View this post on Instagram

    A post shared by Dr Usama Ahmed (@drusamayt)

    ವಿಡಿಯೋದಲ್ಲಿ ಏನಿದೆ?: ಪ್ಯಾರಿಸ್‌ನಲ್ಲಿರುವ ತಮ್ಮ ಹೋಟೆಲ್ ಕೊಠಡಿಯಿಂದ ಅಜ್ಜಿ ಹೊರಗಿನ ವೀಕ್ಷಣೆಯನ್ನು ಆನಂದಿಸುತ್ತಿದ್ದರು. ಪ್ಯಾರಿಸ್‌ನ ಬೀದಿಗಳಲ್ಲಿ ಸುತ್ತಾಡುತ್ತಾ ಶಾಪಿಂಗ್‌ಗೆ ಮಾಡುತ್ತಾರೆ. ‘ನಮ್ಮ ಅಜ್ಜಿಯನ್ನು ಅತ್ಯುತ್ತಮವಾಗಿ ಬದುಕುವಂತೆ ಮಾಡುವುದು ನಮ್ಮ ಕರ್ತವ್ಯ. ಅವಳು ತನ್ನ ಜೀವನದ ಬಹುಪಾಲು ಸಮಯವನ್ನು ನಮ್ಮನ್ನು ಬೆಳೆಸುವುದಕ್ಕೆ ಕಳೆದಳು. ಆದ್ದರಿಂದ, ಈಗ ಇದು ನಮ್ಮ ಸರದಿ’ ಎಂದು ನೀಡಲಾಗಿದೆ.

    ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ, ನೆಟ್ಟಿಗರು ಮೆಚ್ಚುಗೆ ಸೂಚಿಸಿ, ನಿಮ್ಮಂತಹ ಮೊಮ್ಮಕ್ಕಳನ್ನು ಹೊಂದಲು ಅವರು ಅದೃಷ್ಟವಂತರು ಎಂದು ಕಾಮೆಂಟ್​ ಮಾಡಿದ್ದಾರೆ.

    ಹಸೆಮಣೆ ಏರಿದ ಸಲಿಂಗಿ ಜೋಡಿ: ಫೋಟೋ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts