More

    ಹಸೆಮಣೆ ಏರಿದ ಸಲಿಂಗಿ ಜೋಡಿ: ಫೋಟೋ ನೋಡಿ…

    ಕೋಲ್ಕತ್ತಾ: ಪ್ರೀತಿ ಜಗತ್ತನ್ನು ಗೆಲ್ಲುತ್ತದೆ. ಜಾತಿ- ಧರ್ಮ, ಬಡವ-ಶ್ರೀಮಂತ ಎನ್ನುವ ವ್ಯತ್ಯಾಸ ಇರಲಿಲ್ಲ. ಆದರೆ ಇದೀಗ ಪ್ರೀತಿಗೆ ಲಿಂಗ ಬೇಧವು ಇಲ್ಲ ಎನ್ನುವುದಕ್ಕೆ ಹಲವು ಉದಾಹರಣೆಗಳು ಸಾಕ್ಷಿಯಾಗಿವೆ. ಕೋಲ್ಕತ್ತಾದಲ್ಲಿ ಸಲಿಂಗಿ ಜೋಡಿಯೊಂದು ಬೆಂಗಾಲಿ ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ. ಈ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿವೆ.

    ಮೌಸುಮಿ ದತ್ತ ಹಾಗೂ ಮೌನಿತಾ ಮಜಮ್ದಾರ್ ಸಲಿಂಗ ವಿವಾಹವಾದ ಜೋಡಿ, ಇದು ಕೋಲ್ಕತ್ತಾದಲ್ಲಿ ನಡೆದ ಮೂರನೇ ಸಲಿಂಗ ವಿವಾಹವಾಗಿದೆ. ಬೆಂಗಾಲಿ ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆದಿದೆ. ಅರಿಶಿಣಶಾಸ್ತ್ರ, ಸಂಗೀತ, ಮೆಹಂದಿ ಸಪ್ತಪದಿ ಸೇರಿದಂತೆ ಎಲ್ಲಾ ಆಚರಣೆಗಳನ್ನು ನಡೆಸಿದ ಈ ಜೋಡಿ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ.

    ಹಸೆಮಣೆ ಏರಿದ ಸಲಿಂಗಿ ಜೋಡಿ: ಫೋಟೋ ನೋಡಿ…

    ಈ ಕುರಿತಾಗಿ ಕೋಲ್ಕತ್ತಾದ ಬಾಗುಯಾಟಿ ನಿವಾಸಿ ಮೌಸುಮಿ ಮಾತನಾಡಿ, ಪ್ರೀತಿಯಲ್ಲಿ ಬೀಳುವಾಗ ಲಿಂಗದ ವಿಚಾರ ದೊಡ್ಡ ವಿಷಯವಾಗುವುದಿಲ್ಲ. ಪ್ರೀತಿ ಸರಿಯಾದ ವ್ಯಕ್ತಿ ಮತ್ತು ನಿಮ್ಮ ಮನಸ್ಸಿನ ಭಾವನೆಯಾಗಿದೆ. ಪ್ರೀತಿಯು ಎಲ್ಲರನ್ನು ಗೆಲ್ಲುತ್ತದೆ. ತನ್ನ ಸಂಗಾತಿಯ ಕುಟುಂಬ ನನ್ನನ್ನು ಸ್ವೀಕರಿಸುತ್ತದೆ ಎಂಬ ಭರವಸೆಯಲ್ಲಿ ನಾನಿದ್ದೇನೆ ಎಂದು ಹೇಳಿದ್ದಾರೆ.

    ಮೌಮಿತಾ ಹಾಗೂ ಮೌಸಮಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಮೊದಲಿಗೆ ಭೇಟಿಯಾಗಿದ್ದು, ನಂತರ ಚಾಟಿಂಗ್ ಮಾಡುತ್ತಾ ಸ್ನೇಹ ಶುರುವಾಗಿದ್ದು, ನಂತರ ಜೊತೆಯಾಗಿ ಸುತ್ತಾಡಲು ಆರಂಭಿಸಿದ ನಂತರ ಪ್ರೀತಿ ಹುಟ್ಟಿದೆ ಎಂದು ಹೇಳಿಕೊಂಡಿದ್ದಾರೆ.

    ಈ ಜೋಡಿ ಕೋಲ್ಕತ್ತಾದ ಶೋವ ಬಜಾರ್‌ನಲ್ಲಿರುವ ಅರಿಟೋಲಾ ಪ್ರದೇಶದ ಭೂತನಾಥ್ ದೇಗುಲದಲ್ಲಿ ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ. ಮೌನಿತಾ ಮೌಸಮಿ ಹಣೆಗೆ ತಿಲಕ ಇರಿಸಿ ಈ ವಿವಾಹ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

    ಹಸೆಮಣೆ ಏರಿದ ಸಲಿಂಗಿ ಜೋಡಿ: ಫೋಟೋ ನೋಡಿ…

    ಸಲಿಂಗ ಜೋಡಿಗಳ ವಿವಾಹಕ್ಕೆ ಮಾನ್ಯತೆ ಕೊಟ್ಟು ಕಾನೂನುಬದ್ಧಗೊಳಿಸಬೇಕೆ ಬೇಡವೇ ಎಂಬ ಬಗ್ಗೆ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕೆಲವರು ಮಾನ್ಯತೆ ಬೇಕು ಎಂದು ಹೇಳಿದರೆ, ಹಲವು ಧಾರ್ಮಿಕ ಸಂಘಟನೆಗಳು ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬಾರದು ಎಂದು ಕೇಂದ್ರವನ್ನು ಒತ್ತಾಯಿಸಿವೆ.

    ಕೋಲ್ಕತ್ತಾದಲ್ಲಿ ನಡೆದ ಮೂರನೇ ಸಲಿಂಗ ವಿವಾಹವಾಗಿದೆ. ಇದಕ್ಕೂ ಮೊದಲು ಚೈತನ್ಯ ಶರ್ಮಾ ಹಾಗೂ ಅಭಿಷೇಕ್ ರಾಯ್ ಎಂಬ ಸಲಿಂಗ ಜೋಡಿ ವಿವಾಹವಾಗಿದ್ದು, ಆದರೆ ಈ ವಿವಾಹಕ್ಕೂ ಮೊದಲು 2018ರಲ್ಲಿ ಸುಚೇಂದ್ರ ದಾಸ್ ಹಾಗೂ ಶ್ರೀ ಮುಖರ್ಜಿ ಎಂಬುವವರು ಮೊದಲ ಬಾರಿಗೆ ಸಲಿಂಗ ವಿವಾಹವಾಗುವ ಮೂಲಕ ಸಲಿಂಗ ವಿವಾಹಕ್ಕೆ ನಾಂದಿ ಹಾಡಿ ಆ ಸಮುದಾಯದ ಜನರಿಗೆ ಸ್ಪೂರ್ತಿಯಾಗಿದ್ದರು.

    ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಯುವಕನಿಗೆ ಜೀವಾವಧಿ ಶಿಕ್ಷೆ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts