More

    ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಯುವಕನಿಗೆ ಜೀವಾವಧಿ ಶಿಕ್ಷೆ ಪ್ರಕಟ

    ಬೆಂಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಎಫ್​​ಟಿಎಸ್‌ಸಿ 1ನೇ ನ್ಯಾಯಾಲಯ ತೀರ್ಪು ನೀಡಿದೆ.

    ಸೋಮಸಂದ್ರಪಾಳ್ಯದ ನಿವಾಸಿ ಸಿ.ರಾಜು (25) ಅಪರಾಧಿ. ಕಾಲೇಜು ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡು ಅತ್ಯಾಚಾರ ಎಸಗಿದ್ದ. ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಿ ನ್ಯಾ.ಕೆ.ಎನ್. ರೂಪಾ ತೀರ್ಪು ಪ್ರಕಟಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು.

    ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರಿಗೆ ಬಿಜೆಪಿಯಿಂದ ಜೀವ ಬೆದರಿಕೆ ಇದೆ; ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ 

    ಡೆಲಿವರಿ ಬಾಯ್ ಆಗಿದ್ದ ರಾಜು, ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ. ಕರೊನಾ ಲಾಕ್‌ಡೌನ್ ಸಮಯದಲ್ಲಿ ಆಕೆಯ ಮನೆಯಲ್ಲಿ ಯಾರು ಇಲ್ಲದ ವೇಳೆ ಹೋಗಿ ದೈಹಿಕ ಸಂಪರ್ಕ ಬೆಳೆಸಿದ್ದ. ಮತ್ತೆ ಶನಿವಾರ ಕಾಲೇಜಿಗೆ ಬಿಟ್ಟ ಮೇಲೆ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಹಲವು ಬಾರಿ ಖಾಸಗಿ ಕ್ಷಣಗಳನ್ನು ಕಳೆದಿದ್ದ.

    ಇದನ್ನೂ ಓದಿ: ರಸಗುಲ್ಲ ತಂದ ಆಪತ್ತು; ಸಿಹಿ ಸೇವಿಸಿ 70 ಮಂದಿ ಆಸ್ಪತ್ರೆಗೆ ದಾಖಲು

    ನೊಂದ ಬಾಲಕಿ, ಈ ವಿಚಾರವನ್ನು ಪಾಲಕರ ಬಳಿ ಹೇಳಿಕೊಂಡಿದ್ದಳು. ಆಗ ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ರಾಜು ಸಂಪರ್ಕದಿಂದ ಬಾಲಕಿ ದೂರು ಸರಿದಿದ್ದಳು. ಇದೇ ಕೋಪಕ್ಕೆ 2021ರ ಏಪ್ರಿಲ್ 3ರಂದು ಕೆಲಸಕ್ಕೆ ಹೋಗದೆ ಬಾಲಕಿಯನ್ನು ಹಿಂಬಾಲಿಸಿ ನನ್ನ ಮನೆಗೆ ಬಾರದೆ ಇದ್ದರೇ ನನ್ನ ಹೆಣ ನೋಡುತ್ತೀಯ ಎಂದು ಬೆದರಿಸಿದ್ದ. ಕೊನೆಗೆ ಒಪ್ಪಿಕೊಂಡ ಬಾಲಕಿಯನ್ನು ರಾಜು, ತನ್ನ ಮನೆಗೆ ಕರೆದೊಯ್ದು ಹಲ್ಲೆ ನಡೆಸಿದ್ದ. ಅಲ್ಯೂಮಿನಿಯಂ ವೈರ್‌ನಿಂದ ಆಕೆಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಿದ್ದ. ಬಳಿಕ ಪ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯೋಚಿಸಿದ್ದ. ಮತ್ತೆ ಶವದ ಪಕ್ಕ ಕುಳಿತು ಸ್ನೇಹಿತರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದ.

    ಇದನ್ನೂ ಓದಿ: ಟೇಕಾಫ್​ಗೆ ಸಿದ್ದವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ; ತಪ್ಪಿದ ದುರಂತ 

    ಅಲ್ಲಿಂದ ಹೊರಟು ಯಶವಂತಪುರ ರೈಲು ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ್ದ. ಗಾಯಗೊಂಡಿದ್ದ ರಾಜುನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಬಂಡೇಪಾಳ್ಯ ಪೊಲೀಸರು, ಕೊಲೆ ಪ್ರಕರಣ ದಾಖಲು ಮಾಡಿಕೊಂಡು ರಾಜುನನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅದೇಶ ನೀಡಿದೆ.

    ಸಿಎಂ ಹಾದಿಯಲ್ಲಿ ಜಿ.ಪರಮೇಶ್ವರ​​​: ಸನ್ಮಾನ ರೂಪದಲ್ಲಿ ಹಾರ-ತುರಾಯಿ ಸ್ವೀಕರಿಸದಿರಲು ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts