ಸೆಕ್ಸ್​ ಮಾಡಿ ನಿನ್ನನ್ನೇ ಮದ್ವೆಯಾಗ್ತೇನೆ ಎಂದ ಎಸ್ಐ ಸದ್ದಿಲ್ಲದೆ ಪರಾರಿ... ಇದು ಮಹಿಳಾ ಎಸ್​ಐ ದೂರು

Rape
Published on

ಭುವನೇಶ್ವರ: ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಬಂಧಬೆಳೆಸಿ ನಂತರ ಮದುವೆಗೆ ನಿರಾಕರಿಸಿದ ಸಬ್​ಇನ್​ಸ್ಪೆಕ್ಟರ್ ವಿರುದ್ಧ ಮಹಿಳಾ ಸಬ್ಇನ್​​ಸ್ಪೆಕ್ಟರ್ ದೂರು ದಾಖಲಿಸಿದ್ದಾರೆ.

ಒಡಿಶಾದ ಗಂಜಾಂ ಜಿಲ್ಲೆಯ ಖಲ್ಲಿಕೋಟೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಿಲು ಧಾಲ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳಾ ಸಬ್ ಇನ್ಸ್‌ಪೆಕ್ಟರ್ ಆರೋಪಿಸಿದ್ದಾರೆ.

ಮಹಿಳೆ ಸೋಮವಾರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕಚೇರಿಗೆ ಬಂದು ಧಾಲ್ ವಿರುದ್ಧ ದೂರು ದಾಖಲಿಸಿದ್ದಾರೆ.

ಮದುವೆಯ ಆಗುವುದಾಗಿ ಭರವಸೆ ನೀಡಿ ಆರೋಪಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಆದರೆ ನಂತರ ಅವಳನ್ನು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

2017 ರಲ್ಲಿ ಬಿಜು ಪಟ್ನಾಯಕ್ ರಾಜ್ಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ದಿನಗಳಲ್ಲಿ ಎಸ್‌ಐ ಸಿಲು ಧಾಲ್ ಪ್ರೇಮ ನಿವೇದನೆ ಮಾಡಿದ್ದ. ಆದರೆ, ತಮ್ಮಿಬ್ಬರದು ಭಿನ್ನ ಜಾತಿಯಾದ ಕಾರಣ ಆಕೆ ಆ ಪ್ರಸ್ತಾಪವನ್ನು ಸ್ವೀಕರಿಸಲಿಲ್ಲ ಎಂದು ತಿಳಿಸಿದ್ದಾಳೆ.

ವಾಟ್ಸ್‌ಆ್ಯಪ್‌ನಲ್ಲಿ ಅವನು ಸಂದೇಶಗಳನ್ನು ಕಳುಹಿಸುತ್ತಿದ್ದ. ನಂತರ, ಆಕೆ ಸಂಬಲ್ಪುರಕ್ಕೆ ನಿಯೋಜನೆಗೊಂಡಾಗ ಎಸ್‌ಐ ಆಕೆಯ ಮನೆಗೆ ಬಂದು ಅವಳೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಿದ.

ಧಾಲ್ ನ ನಡವಳಿಕೆಯನ್ನು ಪ್ರತಿಭಟಿಸುತ್ತಲೇ ರಾತ್ರಿಯಿಡೀ ಅಳುತ್ತಿದ್ದೆ ಎಂದು ಮಹಿಳೆ ಹೇಳಿದ್ದಾರೆ. ಮದುವೆಯಿಲ್ಲದೆ ಸೆಕ್ಸ್ ಮಾಡುವುದು ಅಪರಾಧ ಎಂದು ಅವಳು ಹೇಳಿದಾಗ, ಧಾಲ್ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ.

ಆತ ಮದುವೆಯಾಗಲು ನಿರಾಕರಿಸಿದ ನಂತರ, ಆಕೆ ಬೇರೆ ಪೊಲೀಸ್ ಠಾಣೆಗೆ ನಿಯೋಜನೆಗೊಂಡಿದ್ದು, ಆರೋಪಿ ಎಸ್‌ಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಜಿಪಿಗೆ ಕೋರಿದ್ದಾರೆ.. ಆರೋಪಿ ಸಬ್ ಇನ್ಸ್‌ಪೆಕ್ಟರ್ ಸದ್ಯ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net