ದೊಡ್ಡ ಮನೆ ಹುಡುಗನನ್ನು ಮದುವೆಯಾದ ಶುಭ್ರ ಅಯ್ಯಪ್ಪ

Shubha Aiyyappa Marriage
Published on

ಬೆಂಗಳೂರು: 'ವಜ್ರಕಾಯ' ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಶುಭ್ರ ಅಯ್ಯಪ್ಪ. ಆ ನಂತರ ಕನ್ನಡದಲ್ಲಿ ನಟಿಸಿದ್ದು ಕಡಿಮೆಯೇ. ಅದಾದ ಮೇಲೆ ಕಳೆದ ತಿಂಗಳು ಅವರ ಒಂದು ಸಿನಿಮಾ ಬಿಡಗಡೆಯಾಗಿತ್ತು. ಅದೇ 'ತಿಮ್ಮಯ್ಯ ಅಂಡ್​ ತಿಮ್ಮಯ್ಯ'. ಈ ಚಿತ್ರದಲ್ಲಿ ದಿಗಂತ್​ಗೆ ನಾಯಕಿಯಾಗಿದ್ದ ಶುಭ್ರ, ಈಗ ಸಪ್ತಪದಿ ತುಳಿದಿದ್ದಾರೆ.

ಕೊಡಗಿನ ಶುಭ್ರ ಅಯ್ಯಪ್ಪ ವೈವಾಹಿಕ ಜೀವನಕ್ಕೆ ಸದ್ದಿಲ್ಲದೆ ಕಾಲಿಡುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಕೇಳಿ ಬರುತ್ತಲೇ ಇತ್ತು. ಅದು ಇಂದು ನಿಜವಾಗಿದೆ. ಶುಭ್ರ, ವಿಶಾಲ್​ ಶಿವಪ್ಪ ಅವರನ್ನು ಇಂದು ಕೊಡಗಿನಲ್ಲಿ ಮದುವೆಯಾಗಿದ್ದಾರೆ.

ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಅವರು, 'ನಾನು ಮತ್ತು ವಿಶಾಲ್​ ಇಂದು ನಮ್ಮ ಆತ್ಮೀಯರ ಸಮ್ಮುಖದಲ್ಲಿ ಮದುವೆಯಾಗಿದ್ದೇವೆ. ವಿಶಾಲ್​ ಅವರ ಕುಟುಂಬದವರಿಗೆ ಸೇರಿದ 150 ವರ್ಷಗಳ ಹಳೆಯ ಮನೆಯಲ್ಲಿ ನಮ್ಮಿಬ್ಬರ ಹತ್ತಿರದವರ ಮಧ್ಯೆ ಮದುವೆಯಾಗಿದೆ' ಎಂದು ಖುಷಿ ಹಂಚಿಕೊಂಡಿದ್ದಾರೆ.

ಕನ್ನಡವಲ್ಲದೆ ತೆಲುಗು ಮತ್ತು ತಮಿಳಿನಲ್ಲೂ ಒಂದೆರಡು ಚಿತ್ರಗಳಲ್ಲಿ ನಟಿಸಿರುವ ಶುಭ್ರ, ಸದ್ಯ ಯಾವುದೇ ಚಿತ್ರದಲ್ಲೂ ನಟಿಸುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net