

Shubman Gill: ನಿನ್ನೆ (ಮೇ.02) ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ 38 ರನ್ಗಳಿಂದ ಶುಭಮನ್ ಗಿಲ್ ಪಡೆ ಗೆದ್ದು ಬೀಗಿತು. ಪಂದ್ಯ ಗೆದ್ದಿದ್ದೇ ಆದರೂ ಶತಕ ಬಾರಿಸುವ ಅವಕಾಶ ಕಳೆದುಕೊಂಡ ಕ್ಯಾಪ್ಟನ್ ಗಿಲ್, ಮೈದಾನದಲ್ಲೇ ಅಂಪೈರ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದು ಕ್ರಿಕೆಟ್ ಪ್ರಿಯರ ಬೇಸರಕ್ಕೂ ಕಾರಣವಾಗಿದೆ.
218 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಂತೆ ಸವಾಲೆಸೆದ ಗುಜರಾತ್ ಟೈಟನ್ಸ್, ಅಂತಿಮವಾಗಿ ಪಂದ್ಯ ಗೆದ್ದು ಬೀಗುವಲ್ಲಿ ಯಶಸ್ವಿಯಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿ ಜಿಟಿಗೆ ಅದ್ಭುತ ಓಪನಿಂಗ್ ಪ್ರದರ್ಶನ ನೀಡಿದ ಗಿಲ್, 38 ಎಸೆತಗಳಲ್ಲಿ 76 ರನ್ ಬಾರಿಸಿದರು. ಸ್ಫೋಟಕವಾಗಿ ಕಾಣಿಸುತ್ತಿದ್ದ ಗಿಲ್, ಶತಕ ಬಾರಿಸುವತ್ತ ಸಾಗುತ್ತಿದ್ದ ವೇಗಕ್ಕೆ ಕ್ಲಾಸೆನ್ ಬ್ರೇಕ್ ಹಾಕಿದರು. ಮೊದಲಿಗೆ ಇದು ಔಟ್ ಎಂದೇ ಹೇಳಲಾದರೂ ವಿಡಿಯೋ ಮತ್ತು ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಔಟ್ ಅಲ್ಲ ಎಂಬ ಮಾತುಗಳು ಕೇಳಿಬಂದಿವೆ.
ರನ್ ಔಟ್ ಆದ ಗಿಲ್ ಅಂಪೈರ್ ವಿರುದ್ಧ ಕಿಡಿಕಾರಲು ಕ್ಲಾಸೆನ್ ವಿಕೆಟ್ ಪಡೆದ ರೀತಿ. ಬಾಲ್ನಿಂದ ವಿಕೆಟ್ಗೆ ಬೀಸಬೇಕಿದ್ದ ಕ್ಲಾಸೆನ್ಮ ತಮ್ಮ ಗ್ಲೌಸ್‌ನಿಂದ ಸ್ಟಂಪ್ ಔಟ್ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಫೀಲ್ಡ್ ಅಂಪೈರ್ಗಳು ತಮ್ಮಿಂದ ನಿರ್ಧರಿಸಲು ಸಾಧ್ಯವಾಗದ ಹಿನ್ನೆಲೆ ಈ ನಿರ್ಧಾರವನ್ನು ಮೂರನೇ ಅಂಪೈರ್ಗೆ ಹಸ್ತಾಂತರಿಸಿದರು. ಹಲವು ಬಾರಿ ಪರಿಶೀಲಿಸಿದ ಬಳಿಕ ಗಿಲ್ ಕ್ರೀಸ್ನೊಳಗೆ ಬರಲು ವಿಫಲವಾಗಿದ್ದಾರೆ ಎಂದು ಔಟ್ ಘೋಷಿಸಿದರು. ಈ ನಿರ್ಣಯ ಗಿಲ್ ಸೇರಿದಂತೆ ಕ್ರಿಕೆಟ್ ಪ್ರಿಯರನ್ನು ಕೆರಳಿಸಿತು.
ತಕ್ಷಣವೇ ಸಿಡಿದೆದ್ದ ಗಿಲ್, ಮೈದಾನದಲ್ಲಿದ್ದ ಅಂಪೈರ್ಗಳ ನಿರ್ಧಾರದ ಬಗ್ಗೆ ಭಾರೀ ಅಸಮಾಧಾನ ವ್ಯಕ್ತಪಡಿಸಿದರು. ನನ್ನದು ಔಟ್ ಅಲ್ಲ. ಔಟ್ ಎನ್ನಲು ಹೇಗೆ ಸಾಧ್ಯ? ಎಂದು ಫೀಲ್ಡ್ ಅಂಪೈರ್ಗಳನ್ನು ಪ್ರಶ್ನಿಸಿದ್ದಾರೆ. ಕೆಲ ನಿಮಿಷ ತೀವ್ರ ವಾಗ್ವಾದ ಶುಭಮನ್ ಗಿಲ್, ಅದೇ ಬೇಸರದಲ್ಲಿ ಪೆವಿಲಿಯನ್ನತ್ತ ಸಾಗಿದರು. ಅಂಪೈರ್ ಕೊಟ್ಟ ತೀರ್ಪು ಕ್ರಿಕೆಟ್ ಪ್ರಿಯರಲ್ಲಿ ಅಚ್ಚರಿ ಮೂಡಿಸಿದ್ದು, ಹಲವರು ಗಿಲ್ ಪರ ಧ್ವನಿ ಎತ್ತಿ, ಅದು ಔಟ್ ಎಲ್ಲ ಎಂದು ವಾದಿಸಿದ್ದಾರೆ,(ಏಜೆನ್ಸೀಸ್).