ಮುಂದೊಂದು ದಿನ ಈತ ಭಾರತ ತಂಡವನ್ನು ಮುನ್ನಡೆಸುವುದು ಪಕ್ಕಾ; ಯುವ ಆಟಗಾರನನ್ನು ಹಾಡಿ ಹೊಗಳಿದ ಮಾಜಿ ಕೋಚ್

Team India
Published on

ನವದೆಹಲಿ: ಟೀಮ್​ ಇಂಡಿಯಾದ ಆರಂಭಿಕ ಆಟಗಾರ ಶುಭಮನ್​ ಗಿಲ್​ ವಿಶ್ವ ಕ್ರಿಕೆಟ್​ನ ಅತ್ಯುತ್ತಮ ಬ್ಯಾಟರ್​ಗಳಲ್ಲಿ ಒಬ್ಬರಾಗಿದ್ದು, ಬ್ಯಾಟಿಂಗ್​ ಶೈಲಿಯ ಮೂಲಕವೇ ತಮ್ಮ ಸಾಮಥ್ಯವನ್ನು ಪ್ರದರ್ಶಿಸಿದ್ದಾರೆ. ಇತ್ತೀಚಿಗೆ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದ ಗಿಲ್​ ಮುಂದಿನ ದಿನಗಳಲ್ಲಿ ಭಾರತ ತಂಡದ ನಾಯಕರಾದರೆ ಟೀಮ್​ಗೆ ಒಳಿತು ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಇನ್ನೂ ಇದಕ್ಕೆ ಧ್ವನಿಗೂಡಿಸಿರುವ ಟೀಮ್​ ಇಂಡಿಯಾದ ಮಾಜಿ ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋರ್​ ಗಿಲ್​ ನಾಯಕನಾಗುವುದು ಸೂಕ್ತ ಎಂದು ಹೇಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ವಿಕ್ರಮ್​ ರಾಥೋರ್, ಗುಜರಾತ್​ ಟೈಟಾನ್ಸ್​ ಹಾಗೂ ಜಿಂಬಾಬ್ವೆ ಸರಣಿಯಲ್ಲಿ ಶುಭಮನ್​ ಗಿಲ್​ ತಂಡವನ್ನು ಮುನ್ನಡೆಸುವಾಗ ಅವರ ಬಾಡಿ ಲಾಂಗ್ವೇಜ್ ನೋಡಿ ಈತನೇ ಭಾರತ ತಂಡದ ನಾಯಕನಾಗಲು ಸೂಕ್ತ ಎನಿಸಿತು. ಈಗ ಆತನಿಗೆ ಉಪನಾಯಕತ್ವ ನೀಡುವ ಮೂಲಕ ಆತನಿಗೆ ಬಿಸಿಸಿಐ ಜವಾಬ್ದಾರಿಯನ್ನು ನೀಡಿದ್ದು, ಆತ ದೊಡ್ಡ ಸ್ಥಾನ ಸಿಗುವ ನಿರೀಕ್ಷೆ ಇದೆ.

ನನ್ನ ಪ್ರಕಾರ ವಿರಾಟ್​ ಹಾಗೂ ರೋಹಿತ್​ರಿಂದ ಅತ್ಯುತ್ತಮವಾದುದನ್ನು ಹೊರತಂದಿದೆ ಎಂದು ನಾನು ಭಾವಿಸುತ್ತೇನೆ. ಶುಭಮನ್​ ವಿಚಾರದಲ್ಲೂ ಇದೇ ಆಗುತ್ತದೆ ಎಂದುಕೊಂಡಿದ್ದೇನೆ. ಆತ ಉಪನಾಯಕನಾಗಿರುವುದು ಸಹ ಉತ್ತಮವಾದುದನ್ನು ಹೊರತರುತ್ತದೆ ಎಂಬ ನಂಬಿಕೆ ನನಗಿದೆ. ಶುಭಮನ್​ನಂತಹ ಯುವಕರಿಗೆ ತಂಡದ ನಾಯಕತ್ವ ನೀಡುವುದು ನನ್ನ ಪ್ರಕಾರ ಸೂಕ್ತ ಎನಿಸುತ್ತದೆ. ಮುಂದಿನ ದಿನಗಳಲ್ಲಿ ಆತ ಮೂರು ಮಾದರಿಗಳಲ್ಲಿ ತಂಡವನ್ನು ಮುನ್ನಡೆಸುತ್ತಾನೆ ಎಂದು ಟೀಮ್​ ಇಂಡಿಯಾದ ಮಾಜಿ ಬ್ಯಾಟಿಂಗ್​ ಕೋಚ್​ ವಿಕ್ರಮ್ ರಾಥೋರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Vikram Gill
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net