ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮೂರನೇ ಅವಧಿಯ ಚೊಚ್ಚಲ ಬಜೆಟ್ನಲ್ಲಿ ಭರಪೂರ ಘೋಷಣೆಗಳನ್ನು ಮಾಡಲಾಗಿದ್ದು, ವಿತ್ತ ಸಚಿವರು ಕ್ಷೇತ್ರ ವಲಯಕ್ಕೆ ಅನುಗುಣವಾಗಿ ಬಜೆಟ್ ಮಂಡನೆ ಮಾಡಿದ್ದು, ಶಿಕ್ಷಣ, ಉದ್ಯೋಗ, ಕೈಗಾರಿಕೆ, ಮಹಿಳೆ, ಕೃಷಿ, ಸೇರಿದಂತೆ ಅನೇಕ ಕ್ಷೇತ್ರಗಳಿಗೆ ನಿರ್ಣಾಯಲ ಘೋಷಣೆಗಳನ್ನು ಮಾಡಿದ್ದಾರೆ. ಸತತ ಏಳನೇ ಬಾರಿಗೆ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಭರಣ ಪ್ರಿಯರಿಗೆ ಶುಭ ಸುದ್ದಿಯನ್ನು ನೀಡಿದ್ದಾರೆ.
ಮೋದಿ ಸರ್ಕಾರದ 3.O ಮೊದಲ ಬಜೆಟ್ನಲ್ಲಿ ಚಿನ್ನ-ಬೆಳ್ಳಿ ಮೇಲಿನ ಕಸ್ಟಮ್ ಡ್ಯೂಟಿಯನ್ನು ಶೇ.10ರಿಂದ 06ಕ್ಕೆ ಕಡತಿಗೊಳಿಸಲಾಗುವುದು ಎಂದು ಘೋಷಿಸಿದ್ದರು. ಈ ಮೂಲಕ ಆಭರಣ ಪ್ರಿಯರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಕೊಟ್ಟಿತ್ತು. ಇದೀಗ ಬಜೆಟ್ನಲ್ಲಿ ಸರ್ಕಾರ ಕಸ್ಟಮ್ ಡ್ಯೂಟಿಯನ್ನು ಕಡಿತಗೊಳಿಸಿದ ಬೆನ್ನಲ್ಲೇ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ 4 ಸಾವಿರ ರೂಪಾಯಿ ಇಳಿಕೆ ಕಂಡಿದ್ದು, ಆಭರಣ ಪ್ರಿಯರು ಫೂಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ: ಕೇಂದ್ರದ ಈ ಬಜೆಟ್ ರಾಜ್ಯವನ್ನು ದಿವಾಳಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಗಳಿಗೆ ಒಳ್ಳೆಯ ಪಾಠ: ಡಾ. ಕೆ. ಸುಧಾಕರ್
ಬಜೆಟ್ನಲ್ಲಿ ಕಸ್ಟಮ್ ಡ್ಯೂಟಿ ಮೇಲಿನ ಕಡಿತ ಘೋಷಿಸುತ್ತಿದ್ದಂತೆ ಚಿನ್ನದ ಬೆಲೆ 10 ಗ್ರಾಂಗೆ 72,838 ರಿಂದ 68,500 ರೂ.ಗೆ ಇಳಿಕೆ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನದ ಬೆಲೆಗಳು ಪ್ರತಿ ಔನ್ಸ್‌ಗೆ $2,397.13 ರಷ್ಟಿದ್ದು, ಇದೇ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ. ಎಂಸಿಎಕ್ಸ್‌ನಲ್ಲಿ ಬೆಳ್ಳಿ ಬೆಲೆಯು ಗಮನಾರ್ಹ ಇಳಿಕೆ ಕಂಡಿದ್ದು, ಪ್ರತಿ ಕೆಜಿಗೆ ರೂ 88,995 ರಿಂದ ರೂ 84,275 ಕ್ಕೆ ಇಳಿದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ತಜ್ಞರೊಬ್ಬರು, ಕಸ್ಟಮ್ಸ್ ಸುಂಕ ಕಡಿತವು ತ್ವರಿತವಾಗಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು, ಹೂಡಿಕೆದಾರರಿಗೆ ಇದು ಸಕಾರಾತ್ಮಕ ಕ್ರಮವಾಗಿದ್ದರೂ, ಭೌಗೋಳಿಕ ರಾಜಕೀಯ ಒತ್ತಡಗಳಿಂದ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ಬೆಲೆಗಳಲ್ಲಿನ ಕುಸಿತವು ಗ್ರಾಹಕರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.