

Shubman Gill: ಇಂದು (ಜು.03) ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಚೊಚ್ಚಲ ದ್ವಿಶತಕ ದಾಖಲಿಸಿದರು. ಭಾರತ ತಂಡದ ನಾಯಕನಾಗಿ, ಅತ್ಯುತ್ತಮ ಬ್ಯಾಟರ್ ಆಗಿಯೂ ಕಾಣಿಸಿಕೊಂಡಿರುವ ಗಿಲ್, ಟೆಸ್ಟ್ ಫಾರ್ಮೆಟ್ನಲ್ಲಿ ದಾಖಲಿಸಿದ ಮೊದಲ ದ್ವಿಶತಕ ಇದಾಗಿದೆ. 311 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಯುವ ಕ್ಯಾಪ್ಟನ್ಗೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿವೆ.
ಆಂಗ್ಲರ ನಾಡಿನಲ್ಲಿ ದ್ವಿಶತಕ ಗಳಿಸಿದ ಮೊದಲ ಭಾರತೀಯ ಕ್ಯಾಪ್ಟನ್, ಇಂಗ್ಲೆಂಡ್‌ನಲ್ಲಿ ದ್ವಿಶತಕ ಗಳಿಸಿದ ಮೂರನೇ ಭಾರತೀಯ ಆಟಗಾರ, ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ ಆರನೇ ಭಾರತೀಯ ನಾಯಕ ಮತ್ತು ವಿದೇಶದಲ್ಲಿ ದ್ವಿಶತಕ ಗಳಿಸಿದ ಎರಡನೇ ಟೀಮ್ ಇಂಡಿಯಾ ಕ್ಯಾಪ್ಟನ್ ಎಂಬ ಹಲವಾರು ವಿಶೇಷ ಹಾಗೂ ಐತಿಹಾಸಿಕ ದಾಖಲೆಗಳು ಇದೀಗ ಶುಭಮನ್ ಹೆಸರಿಗೆ ಸೇರಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ಏಷ್ಯಾದ ನಾಯಕ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ. ಈ ಮೊದಲು, ಶ್ರೀಲಂಕಾದ ಕ್ಯಾಪ್ಟನ್ ಆಗಿ ತಿಲಕರ್ತನೆ ದಿಲ್ಶನ್ 193 ರನ್ ಬಾರಿಸಿದ್ದರು. 2011ರಲ್ಲಿ ಲಾರ್ಡ್ಸ್ನಲ್ಲಿ (ಇಂಗ್ಲೆಂಡ್) ದಿಲ್ಶನ್ ಈ ರನ್ ದಾಖಲಿಸಿದ್ದರು. ಇದೇ ಅತ್ಯಧಿಕ ಎಂದು ಪರಿಗಣಿಸಲಾಗಿತ್ತು.
1. ಶುಬ್‌ಮನ್ ಗಿಲ್ - 250+* (2025)
2. ವಿರಾಟ್ ಕೊಹ್ಲಿ - 149 (2018)
3. ಎಂ.ಎಸ್. ಧೋನಿ - 77 (2011)
4. ಎಂಎಸ್ ಧೋನಿ - 74* (2011)
5. ವಿರಾಟ್ ಕೊಹ್ಲಿ - 51 (2018)
1. ಶುಬ್‌ಮನ್ ಗಿಲ್ - 265* (2025)
2. ವಿರಾಟ್ ಕೊಹ್ಲಿ - 149 (2018)
3. ರಿಷಭ್ ಪಂತ್ - 146 (2022)
4. ಸಚಿನ್ ತೆಂಡೂಲ್ಕರ್ - 122 (1996)
5. ರವೀಂದ್ರ ಜಡೇಜ - 104 (2022)
1. ಶುಬ್‌ಮನ್ ಗಿಲ್ - 265+* (2025) ಬರ್ಮಿಂಗ್ಹ್ಯಾಮ್
2. ಮೊಹಮ್ಮದ್ ಅಜರುದ್ದೀನ್ - 179 (1990) ಮ್ಯಾಂಚೆಸ್ಟರ್
3. ವಿರಾಟ್ ಕೊಹ್ಲಿ - 149 (2018) ಬರ್ಮಿಂಗ್ಹ್ಯಾಮ್
4. ಅಲಿ ಖಾನ್ ಪಟೌಡಿ – 148 (1967) ಲೀಡ್ಸ್
5. ಶುಭಮನ್ ಗಿಲ್ – 147 (2025) ಲೀಡ್ಸ್