ಗಿಲ್ ದ್ವಿಶತಕ! ಇಂಗ್ಲೆಂಡ್​ ನೆಲದಲ್ಲಿ ಟೀಮ್ ಇಂಡಿಯಾ ನಾಯಕನ ದಾಖಲೆಯ ಅಲೆ | Shubman Gill

ವಿಜಯವಾಣಿ - 2025-07-03T185659.236
Published on

Shubman Gill: ಎಡ್ಜ್‌ಬಾಸ್ಟನ್‌ನ ಬರ್ಮಿಂಗ್ಹ್ಯಾಮ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಬಾರಿಸಿದ್ದ ಟೀಮ್ ಇಂಡಿಯಾ ಕ್ಯಾಪ್ಟನ್​, ಇದೀಗ ದ್ವಿಶಕ ಬಾರಿಸುವ ಮೂಲಕ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ.

ಕೊಹ್ಲಿ ದಾಖಲೆ ಉಡೀಸ್​

ಟಾಸ್​ ಸೋತು ಬ್ಯಾಟ್ ಮಾಡಿದ ಭಾರತ ಇಂದು ಎರಡನೇ ದಿನದಾಟಕ್ಕೆ ಕಾಲಿಟ್ಟಿದೆ. ಮೊದಲ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತು. ತಂಡದ ಪರ ಕ್ಯಾಪ್ಟನ್​ ಇನ್ನಿಂಗ್ಸ್​ ತೋರಿರುವ ಶುಭಮನ್ ಗಿಲ್, ಅಜೇಯ ದ್ವಿಶತಕ (200*) ಬಾರಿಸಿ, ಕೊಹ್ಲಿ ದಾಖಲೆಯನ್ನೂ ಮುರಿದಿದ್ದಾರೆ.

ಈ ಹಿಂದೆ 2018ರಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿ 149 ರನ್​ ದಾಖಲಿಸಿದ್ದ ವಿರಾಟ್ ಕೊಹ್ಲಿ, ಭಾರತೀಯ ಆಟಗಾರನಾಗಿ ಇಲ್ಲಿಯವರೆಗೆ ದಾಖಲಿಸಿದ ಅತಿ ಹೆಚ್ಚು ರನ್​ ಎಂಬ ಹೆಗ್ಗಳಿಕೆಗೆ  ಪಾತ್ರರಾಗಿದ್ದರು. ಆದರೆ, ಇಂದಿನ ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ದ್ವಿಶತಕ ಬಾರಿಸುವ ಮೂಲಕ ಗಿಲ್​, ಕಿಂಗ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.

ಆಂಗ್ಲರ ನಾಡಿನಲ್ಲಿ ಗಿಲ್​ ದಾಖಲೆ!

ಪ್ರಸ್ತುತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲಿ ಭಾರತ ತಂಡವನ್ನು ಕ್ಯಾಪ್ಟನ್ ಆಗಿ ಮುನ್ನಡೆಸುತ್ತಿರುವ ಗಿಲ್​, 311 ಎಸೆತಗಳಲ್ಲಿ 200 ರನ್​ ಬಾರಿಸಿದ್ದಾರೆ. ಇದರಲ್ಲಿ 21 ಬೌಂಡರಿ ಮತ್ತು ಎರಡು ಸಿಕ್ಸರ್​ಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net