ಶುಭಾಂಶು ಶುಕ್ಲಾ ಗೂಡ್​ನ್ಯೂಸ್​: ಇದು ಭಾರತೀಯರಿಗೆ ಮಹತ್ವದ ದಿನ! | | Subanshu Shukla

dk - 2025-06-26T171919.514
Published on

Subanshu Shukla: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರು ತಂಡ ಇಂದು(ಜೂ.26) ಸಂಜೆ 4.30 ಗಂಟೆಗೆ ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣ(ISS) ತಲುಪಿತು. ಈ ದಿನ ದೇಶದ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಕ್ಷಣವಾಗಿದೆ.

ಹೌದು, 41 ವರ್ಷಗಳ ಬಳಿ ಭಾರತೀಯನೊಬ್ಬ ಬಾಹ್ಯಕಾಶ ನಿಲ್ದಾಣದಲ್ಲಿ ಕಾಲಿಟ್ಟಿದ್ದಾನೆ. ರಾಕೇಶ್ ಶರ್ಮಾ 1984 ರಲ್ಲಿ ಸೋವಿಯತ್ ಒಕ್ಕೂಟದಿಂದ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು. ಇದರರ್ಥ 41 ವರ್ಷಗಳ ನಂತರ ಒಬ್ಬ ಭಾರತೀಯ ಮತ್ತೆ ಬಾಹ್ಯಾಕಾಶಕ್ಕೆ ಕಾಲಿಟ್ಟಿದ್ದಾನೆ. ಹೀಗಾಗಿ, ಈ ದಿನ ಇತಿಹಾಸ ಪುಟಗಳಲ್ಲಿ ಹಚ್ಚೊತ್ತಿದೆ.

ಜೂ.25 ರಂದು, ಮಧ್ಯಾಹ್ನ 12 ಗಂಟೆ ಸುಮಾರಿಗೆ, ಆಕ್ಸಿಯಮ್ ಮಿಷನ್ -4 ರ ಅಡಿಯಲ್ಲಿ ಗಗನಕ್ಕೆ ಚಿಮ್ಮಿದ ಡ್ರ್ಯಾಗನ್ ನೌಕೆ​​ 28 ಗಂಟೆಗಳ ಪ್ರಯಾಣದ ನಂತರ, ಎಲ್ಲಾ ಸುರಕ್ಷಿತವಾಗಿ ಗಗನಯಾತ್ರಿಗಳು ISS ತಲುಪಿದ್ದಾರೆ.

ಜೂನ್ 26 ರಂದು ಸಂಜೆ 4 ಗಂಟೆಗೆ ISS ನೊಂದಿಗೆ ಯಶಸ್ವಿಯಾಗಿ ಡಾಕ್ ಮಾಡಿತು. ಇದರರ್ಥ ಬಾಹ್ಯಾಕಾಶ ನೌಕೆ ಈಗ ISS ಗೆ ಸಂಪರ್ಕ ಹೊಂದಿದೆ ಮತ್ತು ಸಿಬ್ಬಂದಿ ಸದಸ್ಯರು ಈಗ ನಿಲ್ದಾಣವನ್ನು ಪ್ರವೇಶಿಸಿದ್ದಾರೆ(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net