ನಟಿ ಶ್ರೀಯಾ ಸರಣ್​ ಪತಿಗೆ ಕರೊನಾ ಲಕ್ಷಣ; ಸ್ಪೇನ್​ನ ಬಾರ್ಸಿಲೋನಾ ಮನೆಯಲ್ಲಿ ಪತಿ, ಪತ್ನಿ ಪ್ರತ್ಯೇಕ ವಾಸ

shriya saran
Published on

ಸಿನಿಮಾ ತಾರೆಯರ, ಗಾಯರಿಗೂ ಕರೊನಾ ಅಂಟಿಕೊಂಡ ಉದಾಹರಣೆ ಈಗಿನ್ನೂ ಹಸಿಯಾಗಿರುವಾಗಲೇ ದೂರದ ಸ್ಪೇನ್​ನಲ್ಲಿರುವ ಬಹುಭಾಷಾ ನಟಿ ಶ್ರೀಯಾ ಸರಣ್​ ಪತಿಗೂ ಈಗ ಕರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ. ಪತಿ ಆ್ಯಂಡ್ರಿವ್​ಗೆ ಕರೊನಾದ ಗುಣಲಕ್ಷಣಗಳಾದ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿ ಬಂದಿದ್ದಾರೆ. ಕೂಡಲೇ ಐಸೋಲೇಷನ್​ನಲ್ಲಿ ಇರಿಸುವಂತೆ ವೈದ್ಯರು ಸೂಚಿಸಿದ್ದಾರೆ. ಅದರಂತೆ ಮನೆಗೆ ಬಂದು ಇಬ್ಬರು ಪ್ರತ್ಯೇಕ ಕೋಣೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಬಗ್ಗೆ ಒಂದಷ್ಟು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸ್ಪೇನ್​ನಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ. ಇಡೀ ಸ್ಪೇನ್​ ಲಾಕ್​ಡೌನ್​ ಆಗಿದೆ. ಒಂದು ಮನೆಯಿಂದ ಒಬ್ಬರಿಗೆ ಮಾತ್ರ ಹೊರ ಹೋಗಿ ಬರುವ ಅವಕಾಶ. ಎಲ್ಲವೂ ಕಠಿಣವಾಗಿದೆ. ಈ ನಡುವೆ, ಆ್ಯಂಡ್ರಿವ್​ಗೆ ಕೋವಿಡ್​ 19 ಸೋಂಕಿನ ಲಕ್ಷಣ ಕಂಡುಬಂದಿತ್ತು. ಮೊದ ಮೊದಲಿಗೆ ಗಾಬರಿಯಾಗಿತ್ತು. ಆಸ್ಪತ್ರೆಗೆ ಹೋಗಿಬಂದಿದ್ದೇವೆ. ಐಸೋಲೇಷನ್​ನಲ್ಲಿ ಪತಿಯನ್ನು ಪ್ರತ್ಯೇಕವಾಗಿರಿಸಿದ್ದೇನೆ. ಈಗ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಹೇಳಿಕೊಳ್ಳುತ್ತಾರೆ ಶ್ರೀಯಾ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net