ತಾವರಗೇರಾ: ಇಲ್ಲಿಗೆ ಸಮೀಪದ ಪುರ ಗ್ರಾಮದ ಶ್ರೀ ಸೊಮೇಶ್ವರ ಜಾತ್ರಾ ಮಹೋತ್ಸವ ಸೆಪ್ಟೆಂಬರ್ 11 ಸೋಮವಾರ ಜರುಗಲಿದೆ.

ಇದನ್ನೂ ಓದಿ: ಹರಿಹರದಲ್ಲಿ ಮೇರಿ ಮಾತೆಯ ಜಾತ್ರಾ ಮಹೋತ್ಸವ ಸಂಭ್ರಮ
ಪ್ರತಿ ವರ್ಷದಂತೆ ಈ ವರ್ಷವೂ ಪುರ ಗ್ರಾಮದ ಶ್ರೀ ಸೋಮೇಶ್ವರ ದೇವರ ಜಾತ್ರೆ ಶ್ರಾವಣ ಮಾಸದ ಕೊನೆ ಸೋಮವಾರದಂದು ನಡೆಯಲಿದೆ. ಅಂದು ಬೆಳಗ್ಗೆ ಶ್ರೀಸೋಮೇಶ್ವರ ಮೂರ್ತಿಗೆ ರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ಜರುಗಲಿವೆ.
ಸಂಜೆ ನಾಲ್ಕು ಗಂಟೆಗೆ ಉಮಲೂಟಿ ಗ್ರಾಮದ ಅನ್ನದಾನರಾಜ ನಾಡಗೌಡರ ಮನೆಯಿಂದ ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಕಳಸವನ್ನು ತರುವುದು. ಅಂದೇ ಸಾಯಂಕಾಲ 5-00 ಗಂಟೆಗೆ ಶ್ರೀ ಸೋಮೇಶ್ವರ ಮಹಾ ರಥೋತ್ಸವ ಜರುಗಲಿದೆ.
ಸೆಪ್ಟೆಂಬರ್ 12 ಮಂಗಳವಾರ ಮುಂಜಾನೆ ಮೂರ್ತಿಯನ್ನು ದೇವಸ್ಥಾನದಿಂದ ಅರ್ಚಕರ ಮನೆಗೆ ಕರೆತಂದು, ದಿನಾಂಕ 14ರಂದು ಗುರುವಾರ ಶ್ರೀಸೋಮೇಶ್ವರ ಸ್ವಾಮಿ ದೇವರ ಕಳಸವನ್ನು ಮರಳಿ ಕಳಿಸುವುದು ಸೇರಿ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ಜರುಗಲಿವೆ.
ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಸೋಮೇಶ್ಚರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು.ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ತಾವರಗೇರಾ, ಸಿಂಧನೂರ, ಕುಷ್ಟಗಿ ಹಾಗೂ ಗಂಗಾವತಿ ಡಿಪೋ ಕಡೆಯಿಂದ ಬಸ್ಸಿನ ಸೌಕರ್ಯವಿರುತ್ತದೆ ಎಂದು ಶ್ರೀ ಸೋಮೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷರು ಹಾಗೂ ಕುಷ್ಟಗಿ ತಹಸೀಲ್ದಾರ ಎಂ.ಶೃತಿ ಮಳಪ್ಪಗೌಡ್ರ ತಿಳಿಸಿದ್ದಾರೆ.