'ಶ್ರೀ ರೇಣುಕ ವಿಜಯ‘ ಪುರಾಣ ಪ್ರವಚನ ನಾಳೆಯಿಂದ

20 lxr 4 -Pravachan
Published on

ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಶ್ರಾವಣ ಮಾಸದ ಪ್ರವಚನ ಈ ವರ್ಷ ಆ. 22ರಿಂದ ಸೆ. 15 ರವರೆಗೆ ನೆರವೇರಲಿದೆ. ಈ ವರ್ಷ ನಂಜನಗೂಡು ಶ್ರೀಕಂಠಶಾಸ್ತ್ರಿ ವಿರಚಿತ ‘ಶ್ರೀ ರೇಣುಕ ವಿಜಯ‘ ಪುರಾಣ ಪ್ರವಚನ ಹಮ್ಮಿಕೊಳ್ಳಲಾಗಿದೆ.


ಆ. 22ರ ಸಂಜೆ 6ಕ್ಕೆ ಸೋಮೇಶ್ವರ ದೇವಸ್ಥಾನದಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಪುರಾಣ ಪ್ರಾರಂಭೋತ್ಸವಗೊಳ್ಳಲಿದೆ.


ಪ್ರವಚನ ಕಾರ್ಯಕ್ರಮವನ್ನು ವಿಜಯಕುಮಾರ ಮಹಾಂತಶೆಟ್ಟರ ಉದ್ಘಾಟಿಸುವರು. ಪ್ರಶಾಂತ ನೆಲವಗಿ ಸೇರಿ ಪುರಾಣ ಸೇವೆ ಸಮಿತಿಯವರು ಉಪಸ್ಥಿತರಿರುವರು. ವಿರುಪಾಕ್ಷ ಗವಾಯಿಗಳು ಪುರಾಣ ಪಠಣ, ಎಸ್.ಎಫ್. ಆದಿ ಪುರಾಣ ಪ್ರವಚನ ನೀಡುವರು. ಕಳಕಪ್ಪ ಮುದ್ನಾಪುರ ತಬಲಾ ಸಾಥ್ ನೀಡುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net