

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದಿಂದ, ಯೋಜನೆಯ ಸಾಲೆತ್ತೂರು ವಲಯದ ಮಂಚಿ ನೂಜಿ ಗೋವರ್ಧನ ಗಿರಿಯ ಶ್ರೀಕೃಷ್ಣ ಮಂದಿರಕ್ಕೆ ಮಂಜೂರಾದ ಒಂದು ಲಕ್ಷ ರೂ. ಮೊತ್ತದ ಮಂಜೂರಾತಿ ಪತ್ರವನ್ನು, ವಿಟ್ಲ ತಾಲೂಕಿನ ಯೋಜನಾಧಿಕಾರಿ ರಮೇಶ್, ಕೃಷ್ಣ ಮಂದಿರದ ಅಧ್ಯಕ್ಷ ಮೋಹನದಾಸ್ ಶೆಟ್ಟಿ ಪುದೋಟ್ಟು ಅವರಿಗೆ ಹಸ್ತಾಂತರ ಮಾಡಿದರು.
ಮಂಚಿ ಒಕ್ಕೂಟ ಅಧ್ಯಕ್ಷ ದಿವಾಕರ ನಾಯಕ್, ಅರ್ಚಕ ಜಯದೇವ ಭಟ್, ಒಕ್ಕೂಟ ಸ್ಥಾಪಕ ಅಧ್ಯಕ್ಷ ಗೋವಿಂದ ನಾಯಕ್, ಸಾಲೆತ್ತೂರು ವಲಯ ಮೇಲ್ವಿಚಾರಕಿ ಸವಿತಾ, ಸೇವಾಪ್ರತಿನಿಧಿ ಚಂಚಲಾಕ್ಷಿ, ಏಕನಾಥ, ಕೃಷ್ಣ ಮಂದಿರದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.