

ಮಧೂರು: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಯ 74ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಜರಗಿತು.
ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕೋಶಾಧಿಕಾರಿ ಸತೀಶ್ ಕೂಡ್ಲು ಉದ್ಘಾಟಿಸಿದರು.
ವಿಶ್ರಾಂತ ಎಡಿಎಂ ವಿದ್ಯಾರತ್ನ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ರಾಮಕ್ಷತ್ರಿಯ ಸೇವಾ ಸಂಘ ಅಧ್ಯಕ್ಷ ಸುರೇಶ್ ಕುಮಾರ್ ಕೆಮ್ಮಿಂಜೆ, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಚಂದ್ರಗಿರಿ ಉಪಸಂಘ ಅಧ್ಯಕ್ಷ ಸಿ.ಎಚ್.ಹರೀಶ್ಚಂದ್ರ, ನಿವೃತ್ತ ಅಧ್ಯಾಪಕಿ ಉಷಾ ಪಾರೆಕಡವು ಭಾಗವಹಿಸಿದ್ದರು. ಸಮಾಜಸೇವಕ ಬಿ.ಪಿ.ವೆಂಕಟ್ರಮಣ ಅವರಿಗೆ ಶ್ರೀ ಭಿಕ್ಷು ಗೌರವಾರ್ಪಣೆ ಹಾಗೂ ಕೇರಳ ರಾಜ್ಯ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಪದಕ ಪಡೆದ ಯುವ ಪ್ರತಿಭೆ ನಿಷ್ಮಾ ಬಿ.ಎಂ. ಅವರಿಗೆ ಶ್ರೀ ಭಿಕ್ಷು ಕ್ರೀಡಾ ಗೌರವ ನೀಡಿ ಸನ್ಮಾನಿಸಲಾಯಿತು. ಅಣಂಗೂರು ಶ್ರೀ ಭಿಕ್ಷು ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ ಸಂಘ ಮತ್ತು ಕೋಟೆಕಣಿ ಶ್ರೀ ರಾಮನಾಥ ಮಹಿಳಾ ಭಜನಾ ವೃಂದ ಅವರಿಂದ ಶ್ರೀ ಭಿಕ್ಷು ನಾಮಾವಳಿ ನಡೆಯಿತು.
ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿದರು. ಸಂಘಟಕ ಜಗದೀಶ್ ಕೂಡ್ಲು ನಿರೂಪಿಸಿದರು. ಕಾವ್ಯ ಕುಶಲ ವಂದಿಸಿದರು.