

ಮೂಲ್ಕಿ: ಕೊಲಕಾಡಿ ಶ್ರೀ ಪಿಲಿಚಾಮುಂಡಿ ಸಪರಿವಾರ ದೈವಸ್ಥಾನದ ವರ್ಷಾವಧಿ ನೇಮೋತ್ಸವ ಅಂಗವಾಗಿ ಶ್ರೀ ಉಳ್ಳಾಯ ಹಾಗೂ ಶ್ರೀ ರಕ್ತೇಶ್ವರಿ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ರಾತ್ರಿ ಅನ್ನಸಂತರ್ಪಣೆ, ಮೈಸಂದಾಯ ನೇಮ, ಶ್ರೀ ಕಾಂತೇರಿ ಜುಮಾದಿ ಗಗ್ಗರಸೇವೆ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶೇಷ ಪ್ರಾರ್ಥನೆ, ಭಂಡಾರ ಇಳಿಯುವ ಕಾರ್ಯಕ್ರಮ ಜರುಗಿತು. ಶ್ರೀ ಪಿಲಿ ಚಾಮುಂಡಿ ಸಪರಿವಾರ ಟ್ರಸ್ಟ್ ಹಾಗೂ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.