ಬಂಟಕಲ್ಲು ದೇವಳದಲ್ಲಿ ಶ್ರಾವಣ ಸಂಭ್ರಮ

bantakal temple
ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರಿ ದೇವಳ
Published on

ಶಿರ್ವ: ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರಿ ದೇವಳದಲ್ಲಿ ಶ್ರೀದುರ್ಗಾ ಮಹಿಳಾ ಚೆಂಡೆ ಬಳಗ ಬಂಟಕಲ್ಲು ವತಿಯಿಂದ ಆ.11ರಂದು ಮಧ್ಯಾಹ್ನ 2ರಿಂದ ಶ್ರಾವಣ ಸಂಭ್ರಮ ನಡೆಯಲಿದೆ.

ಮಣಿಪಾಲದ ಸವಿತಾ ಮುರಲೀಧರ್ ಮತ್ತು ಬಳಗದವರಿಂದ ಸಾಂಸ್ಕೃತಿಕ ಸೌರಭ , ಸಭಾ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ಸ್ವಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ಅನಾರೋಗ್ಯ ಪೀಡಿತ ವ್ಯಕ್ತಿಗಳ ಕುಟುಂಬಕ್ಕೆ ಧನಸಹಾಯ, ಸುಹಾಸಿನಿಯವರಿಗೆ ಅರಸಿನ ಕುಂಕುಮ ವಿತರಣೆ ಇತರ ಕಾರ್ಯಕ್ರಮ ಜರುಗಲಿವೆ.

ಬಂಟಕಲ್ಲು ಶ್ರೀದುರ್ಗಾ ಮಹಿಳಾ ಚಂಡೆ ಬಳಗ ಅಧ್ಯಕ್ಷೆ ಗೀತಾ ವಿ.ವಾಗ್ಲೆ ಅಧ್ಯಕ್ಷತೆ ವಹಿಸುವರು. ನಿವೃತ್ತ ಶಿಕ್ಷಕಿ ದೇವಿ ಮಣಿಪಾಲ, ಇನ್ನಂಜೆ ಎಸ್.ವಿ.ಎಚ್. ಆಂಗ್ಲ ಮಾಧ್ಯಮ ಶಾಲಾ ಆಡಳಿತಾಧಿಕಾರಿ ಮಂಜುಳಾ ಎಸ್.ನಾಯಕ್, ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ರಾಜಾಪುರ ಸಾರಸ್ವತ ಸೇವಾ ವೃಂದ ಅಧ್ಯಕ್ಷ ಕೆ.ಆರ್., ಪಾಟ್ಕರ್ ಭಾಗವಹಿಸಲಿದ್ದಾರೆ. ಸಾಧಕರಾದ ಡಾ.ಶ್ವೇತಾ ಚಿದಾನಂದ ಕಾಮತ್ ಬೆಂಗಳೂರು, ಡಾ.ಕಸ್ತೂರಿ ನಾಯಕ್, ನಾಟಿ ವೈದ್ಯ ಪೆರ್ನಾಲ್ ಹರಿಶ್ಚಂದ್ರ ಪ್ರಭು ಅವರನ್ನು ಸನ್ಮಾನಿಸಲಾಗುವುದು. ನಂತರ ಶ್ರಾವಣ ಮಾಸದ ವಿಶೇಷ ತಿಂಡಿ, ತಿನಿಸುಗಳೊಂದಿಗೆ ಸಂಜೆ ಉಪಾಹಾರ ಕೂಟ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net