

ಕೋಟ: ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿ ಭಾಗದ ವಿವಿಧ ನಾಗಬನ ಹಾಗೂ ದೇಗುಲಗಳಲ್ಲಿ ನಾಗಪಂಚಮಿ ವಿಶಿಷ್ಟವಾಗಿ ಆಚರಿಸಲಾಯಿತು. ಪ್ರಕೃತಿ ಉಳಿಸುವ ಉದ್ದೇಶದಿಂದ ಹೆಚ್ಚಿನ ನಾಗಬನ ಮರಮಟ್ಟುಗಳಲ್ಲಿವೆ ಅದರಲ್ಲಿ ಕೋಟದ ಮೂಡುಗಿಳಿಯಾರು, ಹಂದಟ್ಟು ಉರಾಳರಕೇರಿ, ಕೋಟತಟ್ಟು ತುಂಗರ, ಗುಂಡ್ಮಿ ಬುಗುರಿಬೆಟ್ಟು, ಪಾಂಡೇಶ್ವರದ ಮೂಡಹಡು ಹೀಗೆ ಹಲವು ನಾಗಬನಗಳು ಪ್ರಕೃತಿಮಾತೆ ಮಡಿಲಲ್ಲಿ ಆರಾಧಿಸಲ್ಪಡುತ್ತಿದೆ.