

ಹೆಬ್ರಿ: ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಕ್ರಾಸ್ ಬಳಿ ಸುಜಾತಾ ಸ್ಟೋರ್ ಅಂಗಡಿ ಹೆಂಚು ತೆಗೆದು ಒಳನುಗ್ಗಿ ವಸ್ತುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಮಂಗಳವಾರ ತಡರಾತ್ರಿ ವರದಿಯಾಗಿದೆ. ಅಂಗಡಿಯ ಶಟರ್ನ ಬೀಗ ಒಡೆಯಲು ಪ್ರಯತ್ನ ಪಟ್ಟಿದ್ದರು. ಅದು ಸಾಧ್ಯವಾಗದೇ ಇದ್ದಾಗ ಅಂಗಡಿಯ ಕೋಣೆಯ ಹೆಂಚು ತೆಗೆದು ಒಳಗೆ ನುಗ್ಗಿದ್ದಾರೆ. ಒಳಗೆ ಬಾಗಿಲು ಒಡೆದು ಅಂಗಡಿಯಲ್ಲಿದ್ದ ಐದು ಸಾವಿರ ಮೌಲ್ಯದ ವಸ್ತು ಕಳ್ಳತನ ನಡೆದಿದೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.