More

    ಪೊಲೀಸ್​ ಠಾಣೆಯಲ್ಲೇ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಇನ್ಸ್​ಪೆಕ್ಟರ್​

    ನಾಶಿಕ್​: ಕರ್ತವ್ಯನಿರತ ಪೊಲೀಸ್​ ಇನ್ಸ್​ಪೆಕ್ಟರ್​​ ಠಾಣೆಯಲ್ಲೇ ಸರ್ವೀಸ್​ ರಿವಾಲ್ವರ್​ನಿಂದ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಶಿಕ್​ ನಗರದಲ್ಲಿ ಮಂಗಳವಾರ (ಫೆ.20) ಬೆಳಗ್ಗೆ ನಡೆದಿದೆ.

    ಮೃತ ಪೊಲೀಸ್​ ಇನ್ಸ್​ಪೆಕ್ಟರ್​ರನ್ನು ಅಶೋಕ್​ ನಾಜನ್ ಎಂದು ಗುರುತಿಸಲಾಗಿದೆ​. ನಾಶಿಕ್​ ನಗರದ ಅಂಬಾದ್​ ಪೊಲೀಸ್​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಂದು ಬೆಳಗ್ಗೆಯಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ತಲೆಯಲ್ಲಿ ಬುಲೆಟ್​ ಗಾಯದೊಂದಿಗೆ ಅವರ ಟೇಬಲ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಈ ಘಟನೆ ನಾಶಿಕ್​ ನಗರದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದೆ. ನಾಜನ್​ ಅವರು ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದಾಗ್ಯೂ, ಈ ವಿಚಾರದಲ್ಲಿ ಪೊಲೀಸ್​ ತನಿಖೆ ಆರಂಭವಾಗಿದೆ.

    ನಾಜನ್​ ಮೃತಪಟ್ಟ ಸಂಗತಿ ತಿಳಿಯುತ್ತಿದ್ದಂತೆ ನಾಶಿಕ್​ ಪೊಲೀಸ್​ ಕಮಿಷನರ್​ ಸಂದೀಪ್​ ಕಾರ್ಣಿಕ್​ ಮತ್ತು ಕ್ರೈ ಬ್ರಾಂಚ್​ ಅಸಿಸ್ಟಂಟ್​ ಪ್ರಶಾಂತ್​ ಬಚ್ಚೋ ಅಂಬಾದ್​ ಪೊಲೀಸ್​ ಠಾಣೆಗೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. (ಏಜೆನ್ಸೀಸ್​)

    ನೀನು ಯಾವ… ನಟ ದರ್ಶನ್ ಆಡಿದ ಆ ಒಂದು ಮಾತಿಗೆ​ ಕೆರಳಿ ಕೆಂಡವಾದ ಅಹೋರಾತ್ರ, ಅಶ್ಲೀಲ ಪದ ಬಳಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts