ನವದೆಹಲಿ: ವಿಮಾನದಲ್ಲಿರುವ ಪ್ರಯಾಣಿಕರಲ್ಲಿ ಕರೊನಾ ಸೋಂಕಿತರ ಸಂಭವನೀಯತೆ ಬಗ್ಗೆ ಕೇಳಿದ ಇಬ್ಬರು ಪೈಲಟ್ಗಳು ಆನ್ಬೋರ್ಡ್ ವಿಮಾನದ ಕಾಕ್ಪಿಟ್ನಿಂದ ತರಾತುರಿಯಲ್ಲಿ ಆಚೆ ಬಂದ ಶಾಕಿಂಗ್ ಘಟನೆ ನಡೆದಿದೆ.
ಏರ್ ಏಷಿಯಾ ವಿಮಾನದ ಇಬ್ಬರು ಪೈಲಟ್ಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಹೀಗೆ ಮಾಡಿದ್ದಾರೆ. ಕಾಕ್ಪಿಟ್ನ ಕಿಟಕಿ ಯಿಂದ ಏಣಿಯ ಸಹಾಯ ಮೂಲಕ ಹೊರಕ್ಕೆ ಬಂದಿದ್ದಾರೆ. ಈ ಮೂಲಕ ವಿಮಾನದಲ್ಲಿದ್ದದ ಪ್ರಯಾಣಿಕರನ್ನು ಪೈಲಟ್ ನಿರ್ಲಕ್ಷಿಸಿದ್ದಾರೆ.
ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ. ವಿಡಿಯೋದಲ್ಲಿ ಪೈಲಟ್ಗಳು ಭಾರಿ ಎಚ್ಚರಿಕೆಯಿಂದ ಕಾಕ್ಪಿಟ್ನ ಕಿಟಕಿ ತೆಗೆದು ತಮ್ಮ ಲಗೇಜ್ಗಳನ್ನು ತೆಗೆದುಕೊಂಡು ಸ್ಟೇರ್ಸ್ನ ಸಹಾಯದಿಂದ ಹೊರಬಂದಿದ್ದಾರೆ. ಕರೊನಾ ವೈರಸ್ ಎಷ್ಟರಮಟ್ಟಿಗೆ ಭೀತಿ ಸೃಷ್ಟಿಸಿದೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ.
ಇನ್ನು ಜಾಗತಿಕವಾಗಿ ಕರೊನಾ ವೈರಸ್ನಿಂದ ಮೃತಪಟ್ಟವರ ಸಂಖ್ಯೆ 18 ಸಾವಿರವನ್ನು ದಾಟಿದೆ. 4 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. (ಏಜೆನ್ಸೀಸ್)