More

    ಅಧಿಕಾರಿಗಳಿಗೆ ತಲೆನೋವು ತಂದ ಉತ್ತರ ಪ್ರದೇಶದ ದಂಪತಿ: ಕರೊನಾ ಸೋಂಕು ಹೇಗೆ ತಗುಲಿತು ಎಂಬುದೇ ಚಿಂತೆ

    ಲಖನೌ: ಹೊಸದಾಗಿ ನಾಲ್ಕು ಕರೊನಾ ವೈರಸ್​ ಪ್ರಕರಣ ಉತ್ತರ ಪ್ರದೇಶದಲ್ಲಿ ಮಂಗಳವಾರ ವರದಿಯಾಗಿದೆ. ಗೌತಮ್​ ಬುದ್ಧ ನಗರದಿಂದ 3, ಶಾಮ್ಲಿಯಿಂದ ಓರ್ವನಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು 37 ಪ್ರಕರಣಗಳು ದಾಖಲಾಗಿದ್ದು, 68 ಶಂಕಿತರನ್ನು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.

    ಗೌತಮಬುದ್ಧ ನಗರದ ಮೂರು ಪ್ರಕರಣಗಳಲ್ಲಿ ದಂಪತಿ ನೊಯ್ಡಾದ 137ನೇ ಸೆಕ್ಟರ್​ನಲ್ಲಿ ವಾಸವಾಗಿದ್ದು, ಇನ್ನೊರ್ವ ಗ್ರೇಟರ್​ ನೊಯ್ಡಾದ ನಿವಾಸಿಯಾಗಿದ್ದಾರೆ. ಸೋಂಕು ತಗುಲಿರುವ ನೊಯ್ಡಾ ದಂಪತಿಗೆ ಟ್ರಾವೆಲ್​ ಹಿಸ್ಟರಿ ಇರದಿರುವುದರಿಂದ ಅಧಿಕಾರಿಗಳಿಗೆ ತಲೆನೋವಾಗಿದೆ. ಆದರೆ ಲಂಡನ್​ನಿಂದ ಬಂದಿದ್ದ ಆಪ್ತರೊಬ್ಬರಿಗೆ ಆತಿಥ್ಯ ನೀಡಿದ್ದರು ಎನ್ನಲಾಗಿದೆ.

    ಆತಿಥ್ಯ ಸ್ವೀಕರಿಸಿದವರಿಗೇನಾದರೂ ರೋಗದ ಲಕ್ಷಣಗಳಿದ್ದರೆ, ದಂಪತಿಗೆ ಹರಡಿರಬಹುದು ಎಂದು ಅಂದಾಜಿಸಲಾಗಿದೆ. ಲಂಡನ್​ ಅತಿಥಿಯ ಜಾಲವನ್ನು ಪತ್ತೆ ಮಾಡಿದರೆ ಎಲ್ಲ ಸಂಶಯಗಳಿಗೆ ಉತ್ತರ ಸಿಗಲಿದೆ ಎಂದು ಯುಪಿಯ ಆರೋಗ್ಯ ಇಲಾಖೆ ತಿಳಿಸಿದೆ.

    ಗ್ರೇಟರ್​ ನೊಯ್ಡಾದ 33 ವರ್ಷದ ಮತ್ತೋರ್ವ ಸೋಂಕಿತನಿಗೆ ಟ್ರಾವೆಲ್​ ಹಿಸ್ಟರಿ ಇದೆ. ದುಬೈನಿಂದ ಮಾರ್ಚ್​​ 15ಕ್ಕೇ ತವರಿಗೆ ಮರಳಿದ್ದ. ದಿನ ನಿತ್ಯದ ಅಭ್ಯಾಸದಂತೆ ಸೋಂಕಿತನ್ನು ಪತ್ತೆ ಮಾಡಲಾಗಿದ್ದು, ಆತನ ಮನೆಯಲ್ಲೇ ಪ್ರತ್ಯೇಕವಾಗಿದ್ದಾನೆ. ಮೂರು ದಿನಗಳ ಹಿಂದಷ್ಟೇ ಗಂಟಲು ಕೆರೆತ ಇದೆ ಎಂದು ಹೇಳಿದ್ದ ಆತನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಯಿತು. ಬಳಿಕ ಕೋವಿಡ್​ 19 ಇರುವುದು ಧೃಡವಾಗಿದೆ. ಹೀಗಾಗಿ ಸೋಂಕಿತನನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದ್ದು ಆತನ ಮನೆಯ ಪಕ್ಕೆ ಯಾರು ಸುಳಿದಂತೆ ಸೂಚನೆ ನೀಡಲಾಗಿದೆ ಎಂದು ಗೌತಮ್​ಬುದ್ಧ ನಗರದ ಜಿಲ್ಲಾಧಿಕಾರಿ ಬಿ.ಎಸ್​. ಸಿಂಗ್​ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಕಿಲ್ಲರ್ ​ಕರೊನಾ​ ತವರು ಚೀನಾದ ವುಹಾನ್​ನಲ್ಲಿ ಲಾಕ್​ಡೌನ್​ ಸಮಯ ಹೇಗೆ ಕಳೆದೆ ಎಂಬುದನ್ನು ವಿವರಿಸಿದ ಭಾರತೀಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts