More

    VIDEO| ಮಹಿಳೆಯರ ಕಿತ್ತಾಟ: ಓಡಿ ಬಂದು ಜಿಗಿದು ಹೆಂಗಸಿನ ಹೊಟ್ಟೆಗೆ ಒದ್ದ ವ್ಯಕ್ತಿ!

    ಟಿಬಿಲಿಸಿ (ಜಾರ್ಜಿಯಾ): ಕರೊನಾ ಲಾಕ್​ಡೌನ್​ನಿಂದ ಹಲವು ದಿನಗಳವರೆಗೆ ಮುಚ್ಚಿದ್ದ ಜಾರ್ಜಿಯಾ ಮಾಲ್​ ಮರು ತೆರೆಯಲಾಗಿದ್ದು, ಮೊದಲ ದಿನವೇ ಮಾಲ್​ ಹೊರಭಾಗದಲ್ಲಿ ಹೈಡ್ರಾಮವೊಂದು ನಡೆದಿದೆ. ಮೂವರ ನಡುವೆ ನಡೆಯುತ್ತಿದ್ದ ಜಗಳದ ವೇಳೆ ವ್ಯಕ್ತಿಯೊಬ್ಬ ಹಾರಿ ಮಹಿಳೆಯ ಹೊಟ್ಟೆಗೆ ಒದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ: ಕಿಲ್ಲರ್​ ಕರೊನಾಗೆ ರಾಮಬಾಣವಾಯ್ತಾ ಪಾಚಿ ಕಡಲೆ ಮಿಠಾಯಿ…?

    ಜಾರ್ಜಿಯಾದ ಅಟ್ಲಾಂಟಾದಲ್ಲಿರುವ ಕ್ಯುಂಬರ್​ಲ್ಯಾಂಡ್​ ಮಾಲ್​ ಮುಂದೆ ಮಂಗಳವಾರ ನಡೆದ ಹೈಡ್ರಾಮವನ್ನು ಸ್ಥಳದಲ್ಲಿದ್ದವರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಪಾರ್ಕಿಂಗ್​ ಸ್ಥಳದಲ್ಲಿ ವಾಗ್ವಾದಕ್ಕೆ ಇಳಿದಿದ್ದಾಗ ಮಾತಿಗೆ ಮಾತು ಬೆಳೆದು ಒಬ್ಬರಿಗೊಬ್ಬರು ಕಿತ್ತಾಡಿಕೊಂಡರು ಎಂದು ಮೊಬೈಲ್​ನಲ್ಲಿ ಘಟನೆ ಸೆರೆಹಿಡಿದ ವ್ಯಕ್ತಿ ತಿಳಿಸಿದ್ದಾರೆ. ಆದರೆ ಯಾವ ವಿಚಾರಕ್ಕೆ ಅವರು ಜಗಳವಾಡಿದರು ಎಂಬುದು ಅಸ್ಪಷ್ಟವಾಗಿದೆ.

    ವಿಡಿಯೋದಲ್ಲಿ ಏನಿದೆ?: ಮೂವರು ಮಹಿಳೆಯರು ಕಿತ್ತಾಡುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಅದರಲ್ಲಿ ಇಬ್ಬರು ಮಹಿಳೆಯರು ನೆಲದ ಮೇಲೆ ಬಿದ್ದು ಫೈಟ್​ ಮಾಡುವಾಗ ಇನ್ನೊರ್ವ ಮಹಿಳೆ ಕೆಳಗೆ ಬಿದ್ದಿರುವವಳ ಜಡೆ ಹಿಡಿದು ಎಳೆಯುತ್ತಾಳೆ. ಈ ವೇಳೆ ಸೆಕ್ಯುರಿಟಿ ಗಾರ್ಡ್​ ಒಬ್ಬರು ಗಲಾಟೆ ಬಿಡಿಸಲು ಯತ್ನಿಸುತ್ತಾರೆ. ಆದರೆ ಅದು ಸಾಧ್ಯವಾಗಲ್ಲ. ಈ ನಡುವೆ ಸ್ಪೋರ್ಟ್ಸ್​ ಜರ್ಸಿ ಧರಿಸಿದ್ದ ವ್ಯಕ್ತಿಯೊಬ್ಬ ತಕ್ಷಣ ಓಡಿ ಬಂದು ಹಾರಿ ನೆಗೆದು ಜಡೆ ಹಿಡಿದು ಎಳೆಯುತ್ತಿದ್ದ ಮಹಿಳೆಯ ಹೊಟ್ಟೆಗೆ ಒದಿಯುತ್ತಾನೆ. ಬಳಿಕ ಸೆಕ್ಯುರಿಟಿ ಗಾರ್ಡ್​ ಮತ್ತು ಮತ್ತೊಬ್ಬ ಮಹಿಳೆಯನ್ನು ನೂಕಿ ಓರ್ವ ಮಹಿಳೆಯನ್ನು ಅಲ್ಲಿಂದ ಕರೆದೊಯ್ಯುತ್ತಾನೆ.

    ಇದನ್ನೂ ಓದಿ: ಕಾಸ್ಟಿಂಗ್​ ಕೌಚ್​ ಬಗ್ಗೆ ರಣವಿಕ್ರಮನ ಬೆಡಗಿ ಕೊಟ್ರು ಶಾಕಿಂಗ್​ ಸ್ಟೇಟ್​ಮೆಂಟ್​!

    ಘಟನೆ ಬಗ್ಗೆ ಮಾತನಾಡಿರುವ ಸೆಕ್ಯುರಿಟಿ ಗಾರ್ಡ್​, ಹೊರ ಹೋಗಿ ಇಲ್ಲದಿದ್ದರೆ ಇಬ್ಬರಿಗೂ ಪೆಪ್ಪರ್​ (ಮೆಣಸು) ಸ್ಪ್ರೇ ಮಾಡಬೇಕಾಗುತ್ತದೆ ಎಂದು ಹೇಳಿದೆ. ಆದರೆ ಅವರು ಕೆಳಲಿಲ್ಲ ಒಬ್ಬರಿಗೊಬ್ಬರು ಕಿತ್ತಾಡಿಕೊಂಡರು ಎಂದು ತಿಳಿಸಿದ್ದಾರೆ.

    ಇನ್ನು ಕಿತ್ತಾಟದಲ್ಲಿ ಯಾರಿಗೂ ಹಾನಿಯಾಗಿಲ್ಲ. ಈ ಘಟನೆ ಜಾರ್ಜಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಅಟ್ಲಾಂಟಾ ಕರೊನಾದಿಂದ ತಹಬದಿಗೆ ಬರುತ್ತಿದೆ. ಈಗಲೇ ಮಾಲ್​ಗಳನ್ನು ಓಪನ್​ ಮಾಡಬೇಕಿತ್ತಾ? ಇನ್ನು ಸ್ವಲ್ಪ ದಿನ ಸದ್ಯದ ಪರಿಸ್ಥಿತಿಯೇ ಮುಂದುವರಿಯಬೇಕಿತ್ತು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾರ್ಜಿಯಾ ಗವರ್ನರ್​ ಬ್ರೈನ್​ ಕೆಂಪ್​ ಅವರು ಅಕಾಲಿಕವಾಗಿ ದೇಶದ ಆರ್ಥಿಕತೆಯನ್ನು ಓಪನ್​ ಮಾಡಿದ್ದಾರೆಯೇ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: VIDEO| ಚಲಿಸುತ್ತಿದ್ದ ಆಂಬುಲೆನ್ಸ್​ನಿಂದ ಸ್ಟ್ರೆಚರ್ ಸಮೇತ ರಸ್ತೆಗೆ ಬಿದ್ದ ರೋಗಿ: ಮುಂದೇನಾಯಿತು ನೋಡಿ!

    ಕೊಡವ ಜನಾಂಗದ ವಿರುದ್ಧ ಅವಹೇಳನಕಾರಿ ಪೋಸ್ಟ್: ಯುವಕನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts