ಸಾರ್ವಜನಿಕರ ಜೇಬಿಗೆ ಕತ್ತರಿ : ಬೆಲೆ ಏರಿಸಲು ಮುಂದಾದ ಹೊಟೇಲ್​ಗಳು​

hotel
Published on

ಬೆಂಗಳೂರು: ಬೆಲೆ ಏರಿಕೆಯ ಆಘಾತದಿಂದ ಈಗಾಗಲೇ ಕಂಗೆಟ್ಟಿರುವ ರಾಜ್ಯದ ಜನರಿಗೆ ಮತ್ತೊಂದು ಸುತ್ತಿನ ದುಬಾರಿ ಬರೆ ಬೀಳುವುದು ಖಚಿತವಾಗಿದೆ. ಹೋಟೆಲ್ ತಿಂಡಿ ಪ್ರಿಯರಿಗೆ ಕಾದಿದೆ ಶಾಕ್ ಕಾದಿದ್ದು, ಬೆಲೆ ಏರಿಕೆ ಬಗ್ಗೆ ಹೊಟೇಲ್ ಸಂಘವು ಚಿಂತಿಸುತ್ತಿದೆ.

ರಾಜ್ಯಾದ್ಯಂತ ಹಾಲು, ಅಕ್ಕಿ ದರ ಏರಿಕೆಯ ಚರ್ಚೆಯ ಕಾವು ಜೋರಾಗಿರುವ ಬೆನ್ನಲ್ಲೇ, ಆ ಹೊರೆಯನ್ನು ತಿಂಡಿ-ತಿನಿಸು ಪ್ರಿಯರ ಮೇಲೆ ಹೊರಿಸಲು ಹೋಟೆಲ್​ಗಳು ಚಿಂತಿಸುತ್ತಿವೆ. ಕಾಫಿ, ಟೀ, ತಿಂಡಿ ಬೆಲೆ ಏರಿಕೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಏಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾಹಿತಿ ನೀಡಿದ್ದಾರೆ.

ಒಂದು ಕಡೆ ವಿದ್ಯುತ್ ದರ ಹೆಚ್ಚಳ, ಇನ್ನೊಂದು ಕಡೆ ಹಾಲಿನ ದರ ಹೆಚ್ಚಳ ಸಾಧ್ಯತೆ ಹೆಚ್ಚಳವಾಗಿದೆ. ಜತೆಗೆ ಹೋಟೆಲ್​ನಲ್ಲಿ ಉಪಯೋಗಿಸುವ ಗ್ಯಾಸ್. ತರಕಾರಿ, ಬೇಳೆ ಸೇರಿದಂತೆ ಎಲ್ಲ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಈ ದರ ಏರಿಕೆಯ ಹೊಡೆತ ಹೋಟೆಲ್​ ಉದ್ಯಮದ ಮೇಲೂ ಪರಿಣಾಮ ಬೀರುತ್ತಿದೆ.

ಸರ್ಕಾರದ ವಿದ್ಯುತ್ ದರ ಏರಿಕೆಯ ಜತೆಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ದರ ಏರಿಕೆ ಸುಳಿವು ನೀಡುತ್ತಿದೆ. ಇವುಗಳ ಪರಿಣಾಮ ನೇರವಾಗಿ ಹೋಟೆಲ್​ಗಳ ಮೇಲೆ ಬೀಳಲಿದ್ದು, ಅನಿವಾರ್ಯವಾಗಿ ನಾವು ಕೂಡ ಬೆಲೆ ಏರಿಸಬೇಕಾಗಿದೆ ಎಂದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಬೆಲೆಯೇರಿಕೆಯಿಂದ ಕಂಗಾಲಾಗಿದ್ದ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net