ಹಾಕಿಯಲ್ಲಿ ಬ್ರಿಟನ್​ಗೆ ಆಘಾತ: ಪೆನಾಲ್ಟಿ ಶೂಟೌಟ್​ನಲ್ಲಿ ಗೆದ್ದು ಸೆಮಿಗೆ ಲಗ್ಗೆಯಿಟ್ಟ ಭಾರತ! ಪದಕಕ್ಕೆ ಇನ್ನೊಂದೇ ಹೆಜ್ಜೆ

haki
Published on

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಂದು ನಡೆದ ಬ್ರಿಟನ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡವು ಅಮೋಘ ಗೆಲವು ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ ಪದಕದ ಆಸೆ ಜೀವಂತವಾಗಿರಿಸಿದೆ.

ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಪದಕಕ್ಕೆ ಭಾರತ ಒಂದು ಗೆಲುವಿನ ಅಂತರದಲ್ಲಿದೆ. ಈಗ ಸೆಮಿಫೈನಲ್‌ನಲ್ಲಿ ಜರ್ಮನಿ ಅಥವಾ ಅರ್ಜೆಂಟೀನಾವನ್ನು ಎದುರಿಸಲಿದೆ.

10 ಮಂದಿ ಆಟಗಾರರನ್ನು ಒಳಗೊಂಡ ಹರ್ಮನ್‌ಪ್ರೀತ್ ಸಿಂಗ್ ಪಡೆ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಗ್ರೇಟ್​ ಬ್ರಿಟನ್​ ತಂಡವನ್ನು ಪೆನಾಲ್ಟಿ ಶೂಟೌಟ್​ನಲ್ಲಿ 4-2 ಗೋಲುಗಳ ಅಂತರದಿಂದ ಮಣಿಸಿ ಐತಿಹಾಸಿಕ ಸಾಧನೆ ಮಾಡಿತು. ಬಳಿಕ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಭಾರತ 4-2 ರಿಂದ ಜಯಗಳಿಸಿತು.

ನಾಲ್ಕನೇ ಕ್ವಾರ್ಟರ್​ ಪಂದ್ಯದ ಮುಕ್ತಾಯದ ವೇಳೆ 1-1 ಗೋಲುಗಳಿಂದ ಪಂದ್ಯ ಟೈಗೊಂಡ ಕಾರಣ ಫಲಿತಾಂಶ ನಿರ್ಣಾಯಕ್ಕೆ ಫೆನಾಲ್ಟಿ ಶೂಟ್​ಔಟ್​ ಮೊರೆಹೋಗಲಾಯಿತು. ಇಲ್ಲಿ ಭಾರತ ಮೇಲುಗೈ ಸಾಧಿಸಿತು. ಶೂಟೌಟ್ ನಲ್ಲಿ ರಾಜ್ ಕುಮಾರ್ ನಿರ್ಣಾಯಕ ಗೋಲು ದಾಖಲಿಸಿದರು.

ಟೋಕಿಯೊ ಒಲಿಂಪಿಕ್ಸ್​ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿಯೂ ಭಾರತ ತಂಡ ಬ್ರಿಟನ್​ ತಂಡವನ್ನೇ ಮಣಿಸಿ ಸೆಮಿಫೈನಲ್​ ಪ್ರವೇಶಿಸಿತ್ತು. ಪೆನಾಲ್ಟಿ ಶೂಟೌಟ್​ನಲ್ಲಿ ಭಾರತದ ಪರ ಹರ್ಮನ್‌ಪ್ರೀತ್, ಲಲಿತ್, ಸುಖಜೀತ್, ಅಭಿಷೇಕ್ ಮತ್ತು ರಾಜ್‌ಕುಮಾರ್ ಗೋಲು ಬಾರಿಸಿದರು. ಬ್ರಿಟನ್‌ ಪರ ಜೇಮಸ್‌ ಆಲ್ಬೆ, ವಾಲಸ್‌ ಗೋಲು ಬಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net