

ಹೆಬ್ರಿ: ಕುಚ್ಚೂರು ದೇವಳಬೈಲು ಶಿವರಾಮ ಶೆಟ್ಟಿ ಯಶಸ್ವಿ ಕೃಷಿಕರಾಗಿದ್ದರು. ಜತೆಗೆ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭ ಸಂಪೂರ್ಣ ತೊಡಗಿಸಿಕೊಂಡು, ಅನೇಕ ಸಾಮಾಜಿಕ ಕೆಲಸಗಳ ಮೂಲಕ ಪ್ರಸಿದ್ಧರಾಗಿದ್ದರು. ಪರಸ್ಪರ ಸಹಕಾರ ಮನೋಭಾವ ಜತೆಗೆ ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುತ್ತಿದ್ದ ಮೇರು ವ್ಯಕ್ತಿತ್ವ ಅವರದು ಎಂದು ಶಿಕ್ಷಕ ಮಂಜುನಾಥ್ ಶೆಟ್ಟಿ ಹೇಳಿದರು.
ಕುಚ್ಚೂರು ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ದಿ.ದೇವಳಬೈಲು ಶಿವರಾಮ ಶೆಟ್ಟಿ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಕೃಷಿಕ ರಾಜೀವ ಶೆಟ್ಟಿ ಶಿವರಾಮ ಶೆಟ್ಟಿ, ನೀರೆಕೃಷ್ಣ ಶೆಟ್ಟಿ, ಕುಚ್ಚೂರು ದೊಡ್ಮನೆ ಕುಟುಂಬಸ್ಥರು, ಪ್ರವೀಣ್ ಬಲ್ಲಾಳ್, ರಾಮನಂದ ಹೆಗ್ಡೆ, ದೇವಳಬೈಲ್ ಸುಧಾಕರ ಶೆಟ್ಟಿ, ಹರೀಶ್ ಶೆಟ್ಟಿ ಬಾದ್ಲು, ಕಿರಣ್ ತೋಳಾರ್, ಬಿ.ಕರುಣಾಕರ ಶೆಟ್ಟಿ, ಪುತ್ರರಾದ ಸುಜಿತ್ ಶೆಟ್ಟಿ, ಪ್ರಸನ್ನ ಶೆಟ್ಟಿ ಉಪಸ್ಥಿತರಿದ್ದರು.