ಲಾಂಗ್ ಲಾಂಗ್ ಎಗೋ ಲಾಂಗ್ ಹಿಡಿದ ಅನುಭವದಿಂದ 'ಪಡ್ಡೆಹುಲಿ'ಗೆ ಲಾಂಗ್ ಹಿಡಿಯಲು ಹೇಳ್ಕೊಟ್ಟ ಶಿವಣ್ಣ

Feature
Published on

ಬೆಂಗಳೂರು: ಲಾಂಗ್ ಲಾಂಗ್ ಎಗೋ.. ಅಂದರೆ 26 ವರ್ಷಗಳ ಹಿಂದೆಯೇ ಉಪೇಂದ್ರ ನಿರ್ದೇಶನದ 'ಓಂ' ಚಿತ್ರದ ಮೂಲಕ ನಟ ಶಿವರಾಜಕುಮಾರ್​ ಲಾಂಗ್ ಹಿಡಿದು ಸ್ಯಾಂಡಲ್​ವುಡ್​ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಲ್ಲದೇ, ಆ ಬಳಿಕ ಲಾಂಗ್ ಝಳಪಿಸುವಂಥದ್ದೇ ಅನೇಕ ಕಥೆಗಳಿಗೆ ಓಂಕಾರ ಹಾಡಿ, ಅಂಥದ್ದೇ ಹಲವಾರು ಸಿನಿಮಾಗಳ ಲಾಂಗ್​ ಜರ್ನಿಗೆ ಕಾರಣವಾಗಿದ್ದು ಈಗ ಇತಿಹಾಸ.

'ಓಂ' ಬಳಿಕ ಅದೇ ಪ್ರೇರಣೆಯಿಂದ ಲಾಂಗ್ ಪ್ರಧಾನ ಕಥೆ ಇರುವ ಅದೆಷ್ಟೋ ಸಿನಿಮಾಗಳು ಬಂದಿವೆ. ಅವುಗಳಲ್ಲಿ ಒಂದಷ್ಟು ಯಶಸ್ಸು ಕಂಡಿದ್ದರೆ, ಇನ್ನೊಂದಷ್ಟು ಕ್ಲಿಕ್​ ಆಗದ ಉದಾಹರಣೆಗಳೂ ಇವೆ. ಏನೇ ಆದರೂ ಕನ್ನಡದ ಹಲವು ಸಿನಿಮಾಗಳಲ್ಲಿ ಹೀರೋಗೂ ಲಾಂಗ್​ಗೂ ಒಂದು ಅವಿನಾಭಾವ ಸಂಬಂಧ.

ಇದೀಗ ನಿರ್ಮಾಪಕ ಕೆ. ಮಂಜು ಅವರ ಪುತ್ರ 'ಪಡ್ಡೆಹುಲಿ' ಖ್ಯಾತಿಯ ಶ್ರೇಯಸ್​​ ನಾಯಕನಾಗಿ ಅಭಿನಯಿಸುತ್ತಿರುವ, ಗುಜ್ಜಲ್ ಪುರುಷೋತ್ತಮ್​ ನಿರ್ಮಾಣ, ನಂದಕಿಶೋರ್​ ನಿರ್ದೇಶನದ 'ರಾಣಾ' ಚಿತ್ರದಲ್ಲೂ ಲಾಂಗ್ ಬಹಳಷ್ಟು ಝಳಪಿಸಲಿದ್ದು, ಅದಕ್ಕಾಗಿ ಚಿತ್ರೀಕರಣ ಭರದಿಂದ ಸಾಗಿದೆ.

ಈ ನಡುವೆ 'ರಾಣಾ' ಚಿತ್ರತಂಡ ಇತ್ತೀಚೆಗೆ ನಟ ಶಿವರಾಜಕುಮಾರ್ ಅವರನ್ನು ಭೇಟಿ ಮಾಡಿದ್ದು, ಅವರು ಚಿತ್ರತಂಡವನ್ನು ಹುರಿದುಂಬಿಸಿ ಶುಭ ಕೋರಿದ್ದಾರೆ. ಮಾತ್ರವಲ್ಲ, ಇದೇ ಸಂದರ್ಭದಲ್ಲಿ ನಟ ಶ್ರೇಯಸ್​ಗೆ ಲಾಂಗ್ ಹೇಗೆ ಹಿಡಿಯಬೇಕು, ಕ್ಯಾಮರಾ ಮುಂದೆ ಲಾಂಗ್ ಹೇಗೆ ಝಳಪಿಸಬೇಕು ಎಂಬ ಕುರಿತು ಸ್ವತಃ ಲಾಂಗ್ ಹಿಡಿದು ಟಿಪ್ಸ್ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net