More

    ಶಿವಣ್ಣ@37, ವೇದ@50; ಇನ್ನೂ 25 ವರ್ಷ ನಟಿಸುವ ಆಸೆ ಇದೆ ಎಂದ ಶಿವಣ್ಣ

    ಬೆಂಗಳೂರು: ಶಿವರಾಜಕುಮಾರ್ ಅವರಿಗೆ ಡಬಲ್ ಸಂಭ್ರಮ. ಇತ್ತೀಚೆಗಷ್ಟೆ ಅವರು ಚಿತ್ರರಂಗದಲ್ಲಿ 37 ವಸಂತಗಳನ್ನು ಪೂರೈಸಿದರು. ಜತೆಗೆ ಅವರು ನಟಿಸಿದ 125ನೇ ಸಿನಿಮಾ ವೇದ ಕೂಡ 50 ದಿನಗಳನ್ನು ಪೂರೈಸಿದೆ. ಹೀಗಾಗಿ ಎರಡು ಪಟ್ಟು ಖುಷಿಯಲ್ಲಿರುವ ಶಿವರಾಜಕುಮಾರ್, ಭಾನುವಾರ (ಫೆ. 19) ‘ವೇದ’ ಚಿತ್ರತಂಡದ ಜತೆ ಸಂಭ್ರಮ ಹಂಚಿಕೊಂಡರು.

    ‘ಮೊದಲು ತಂದೆ-ತಾಯಿ, ಉದಯ್ ಶಂಕರ್, ಸಿಂಗೀತಂ ಶ್ರೀನಿವಾಸ ರಾವ್, ಶಂಕರ್-ಗಣೇಶ್ ಅವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. 1986ರಲ್ಲಿ ‘ಆನಂದ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದೆ. ಈಗ ‘ವೇದ’ 125ನೇ ಚಿತ್ರ. ಮೊದಲ ಚಿತ್ರವನ್ನು ಅಮ್ಮ ನಿರ್ವಿುಸಿದ್ದರು, ಈ ಚಿತ್ರಕ್ಕೆ ಪತ್ನಿ ಗೀತಾ ನಿರ್ಮಾಪಕಿ. ಈ ನಡುವೆ ಸಿನಿಮಾಗಳು 100 ದಿನ ಓಡುವುದು ಕಡಿಮೆ. ಕಳೆದ ವರ್ಷ ‘ಕಾಂತಾರ’ 100 ದಿನ ಪೂರೈಸಿತ್ತು. ‘ಟಗರು’ ಚಿತ್ರ 25 ವಾರ ಓಡಿತ್ತು. ಈಗ ‘ವೇದ’ 50 ದಿನ ಪೂರ್ಣಗೊಳಿಸಿದೆ, ಖುಷಿಯಾಗುತ್ತಿದೆ. ಚಿತ್ರರಂಗದಲ್ಲಿ 37 ವರ್ಷ ಪೂರ್ಣಗೊಳಿಸಿದ್ದೇನೆ, ದೇವರ ಆಶೀರ್ವಾದವಿದ್ದರೆ ಇನ್ನೂ 25 ವರ್ಷ ನಟಿಸುತ್ತೇನೆ’ ಎಂದು ಸಂತಸ ಹಂಚಿಕೊಂಡರು ಶಿವರಾಜಕುಮಾರ್.

    ಕೆಲವು ದಿನಗಳ ಹಿಂದಷ್ಟೇ ‘ವೇದ’ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು, 10 ಕೋಟಿ ನಿಮಿಷಗಳಷ್ಟು ವೀಕ್ಷಣೆಯಾಗಿ, ಉತ್ತಮ ಪ್ರತಿಕ್ರಿಯೆ ಪಡೆದಿದೆ. ‘‘ವೇದ’ ಚಿತ್ರದಲ್ಲಿ ನಟಿಸಿರುವ ಹೆಣ್ಣುಮಕ್ಕಳು, ನಟರಿಗಿಂತ ಒಂದು ಕೈ ಮೇಲೆ. ಶಿವಣ್ಣನಿಗಿಂತ ಒಂದು ಕೈ ಮೇಲೆ. ನನಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹೀಗಾಗಿ ಹೆಣ್ಣುಮಕ್ಕಳು ಹೆಸರು ಮಾಡಬೇಕು ಅಂತ ಆಸೆ ಪಡುತ್ತೇನೆ. ಅರುಣ್ ಸಾಗರ್ ‘ಜನುಮದ ಜೋಡಿ’ ಚಿತ್ರದ ಮೂಲಕ ಜರ್ನಿ ಶುರು ಮಾಡಿದ್ದರು. ಇದೀಗ ಅವರ ಪುತ್ರಿ ಅದಿತಿ ಸಾಗರ್ ‘ವೇದ’ ಮೂಲಕ ಜರ್ನಿ ಶುರು ಮಾಡಿದ್ದಾರೆ’ ಎಂದು ಹೇಳಿದರು ಶಿವರಾಜಕುಮಾರ್. ‘ವೇದ’ ಚಿತ್ರತಂಡದ ಎಲ್ಲ ಸದಸ್ಯರಿಗೂ ನೆನಪಿನ ಕಾಣಿಕೆ ನೀಡಿ ಚಿತ್ರ 50 ದಿನ ಪೂರೈಸಿದ ಸಂಭ್ರಮ ಹಂಚಿಕೊಂಡರು ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ದಂಪತಿ.

    ಬರ್ತ್​ಡೇ ಪಾರ್ಟಿಯಲ್ಲಿ ಚಿತ್ರನಟನ ಮೇಲೆ ಹಲ್ಲೆ; ಆಡಿ ಕಾರಿನ ಗಾಜುಗಳು ಧ್ವಂಸ

    ಹಠಾತ್ ಹೃದಯಾಘಾತಕ್ಕೆ ಮತ್ತೆರಡು ಬಲಿ; ಕ್ರಿಕೆಟ್​ ಆಡುತ್ತಲೇ ಕುಸಿದು ಬಿದ್ದ ಆಟಗಾರರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts