ಹಠಾತ್ ಹೃದಯಾಘಾತಕ್ಕೆ ಮತ್ತೆರಡು ಬಲಿ; ಕ್ರಿಕೆಟ್​ ಆಡುತ್ತಲೇ ಕುಸಿದು ಬಿದ್ದ ಆಟಗಾರರ ಸಾವು

Cricket
Published on

ನವದೆಹಲಿ: ದೇಶಾದ್ಯಂತ ಹಠಾತ್ ಹೃದಯಾಘಾತ ಪ್ರಕರಣಗಳ ಸರಣಿ ಮುಂದುವರಿದಿದ್ದು, ಆ ಪಟ್ಟಿಗೆ ಇನ್ನಿಬ್ಬರ ಸೇರ್ಪಡೆಯಾಗಿದೆ. ಇಬ್ಬರು ಯುವಕರು ಕ್ರಿಕೆಟ್ ಆಡುವಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.

ಪ್ರಶಾಂತ್ ಕಾಂತಿಭಾಯ್​ ಭರೋಲಿಯಾ (27) ಮತ್ತು ಜಿಗ್ನೇಶ್ ಚೌಹಾನ್​ (31) ಸಾವಿಗೀಡಾದವರು. ಈ ಪೈಕಿ ಒಬ್ಬರು ಸೂರತ್​ನವರು, ಇನ್ನೊಬ್ಬರು ರಾಜ್​ಕೋಟ್​ನವರು. ಸೂರತ್​ನಲ್ಲಿ ಪ್ರಶಾಂತ್ ಶನಿವಾರ ಕ್ರಿಕೆಟ್​ ಆಡಿ ಮುಗಿಸುತ್ತಿದ್ದಂತೆ ಎದೆನೋವಿಗೆ ಒಳಗಾಗಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಿಸಿಕೊಳ್ಳಲು ಆಗಿರಲಿಲ್ಲ.

ಜಿಗ್ನೇಶ್ ಚೌಹಾಣ್​ ರಾಜ್​ಕೋಟ್​​ನ ಮಾಧವರಾವ್ ಸಿಂಘ್ಯಾ ಮೈದಾನದಲ್ಲಿ ಭಾನುವಾರ ಕ್ರಿಕೆಟ್ ಆಡುತ್ತಿದ್ದಾಗ ಕುಸಿದು ಬಿದ್ದಿದ್ದರು. ಅಂದರೆ ಬ್ಯಾಟಿಂಗ್ ಮಾಡುತ್ತ ಔಟ್​ ಆಗಿ ಬಂದು ಕುರ್ಚಿಯಲ್ಲಿ ಕುಳಿತಿದ್ದರು. ನಂತರ ಎದೆನೋವಿನಿಂದ ಬಳಲಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅಸುನೀಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net