

ಹುಬ್ಬಳ್ಳಿ: ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪಚುನಾವಣೆ (ByElection) ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಯಕರು ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ. ಇನ್ನೂ ಬಹಿರಂಗ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಕಾಯ್ದೆಯಲ್ಲಿ ತಿದ್ದು ಮಾಡಿ, ಸಿವಿಲ್ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.04ರಷ್ಟು ಮಿಸಲಾತಿ (Reservation) ನೀಡಲಾಗುವುದು ಎಂದು ಹೇಳಿದ್ದರು. ಆ ಬಳಿಕ ವಿರೋಧ ವ್ಯಕ್ತವಾದ ಹಿನ್ನೆಲೆ ಅಂತಹ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹೇಳಿ ಕೈತೊಳೆದುಕೊಂಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿಕೆಗೆ ಸ್ಪಷ್ಟನೆ ನೀಡುವ ಭರದಲ್ಲಿ ಸಚಿವರೊಬ್ಬರು ಸಮರ್ಥನೆ ಮಾಡಿಕೊಂಡು ವಿವಾದಕ್ಕೀಡಾಗುವ ಮೂಲಕ ಸುದ್ದಿಯಾಗಿದ್ದಾರೆ.
ಅಲ್ಪಸಂಖ್ಯಾತ ಗುತ್ತಿದಾರರಿಗೆ ರಾಜ್ಯದ ಕಾಮಗಾರಿಗಳಲ್ಲಿ ಮೀಸಲಾತಿಗೆ ನೀಡದರೆ ತಪ್ಪೇನು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ (Shivanand Patil) ಹೇಳುವ ಮೂಲಕ ಉಪಚುನಾವಣೆಗೆ ಮತದಾನ ನಡೆಯುವ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ಕಿಡಿ ಹೊತ್ತಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಸಚಿವ ಶಿವಾನಂದ್ ಪಾಟೀಲ್ (Shivanand Patil), ಅಲ್ಪಸಂಖ್ಯಾತ ಗುತ್ತಿದಾರರಿಗೆ ಶೇ.04ರಷ್ಟು ಮೀಸಲಾತಿ ಕೊಟ್ಟರೆ ತಪ್ಪೇನು. ಮೀಸಲಾತಿ ಕೇಳೋದು ಎಲ್ಲರ ಹಕ್ಕಾಗಿದೆ. ಎಲ್ಲ ಸಮುದಾಯಕ್ಕೂ ಮೀಸಲಾತಿ ಕೇಳುವ ಹಕ್ಕು ಇದೆ ಆರ್ಥಿಕವಾಗಿ ಹಿಂದುಳಿರುವ ಸಮುದಾಯಕ್ಕೆ ಮೀಸಲಾತಿ ನೀಡಿದರೆ ತಪ್ಪೇನಿಲ್ಲ.
ಹಿಂದೂಗಳಲ್ಲಿ ಸಹ ಬಡವರು ಇದ್ದಾರೆ. ಲಿಂಗಾಯತರು ಸಹ ಮೀಸಲಾತಿ ಕೇಳುತ್ತಿದ್ದಾರೆ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳು ಮೀಸಲಾತಿ ಕೇಳುತ್ತಿವೆಒಟ್ಟಾರೆ ದೇಶದಲ್ಲಿ ಬಡವರ ಸಂಖ್ಯೆ ಜಾಸ್ತಿ ಇದೆ. ಗೊಲ್ಲ ಸಮುದಾಯ ಎಸ್ಸಿ ನೂ ಅಲ್ಲ, ಎಸ್ಟಿ ಅಲ್ಲಾ ಅಂತಹ ಸಮುದಾಯವನ್ನು ನೋಡಬೇಕು. ರಾಜಕೀಯವಾಗಿ ಹಿಂದೂ- ಮುಸ್ಲಿಂ ಅಂತ ಮಾತನಾಡುತ್ತಾ ನಾವು ಅವರು ವೈರಿಗಳು ಎನ್ನುವ ಮನಸ್ಥಿತಿಗೆ ಬಂದಿದ್ದೇವೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರು ಮೀಸಲಾತಿ ಕೇಳಬಹುದು ಎಂದ ಅವರು ಆದರೆ ಅದನ್ನು ರಾಜಕೀಯ ಮಾಡಬಾರದು ಎಂದು ಸಚಿವ ಶಿವಾನಂದ ಪಾಟೀಲ್ (Shivanand Patil) ಹೇಳಿದ್ದಾರೆ.