ನವದೆಹಲಿ: ಇತ್ತೀಚಿಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ (Test Series) ವೈಟ್ವಾಷ್ ಆಗುವ ಮೂಲಕ ತೀವ್ರ ಮುಖಭಂಗ ಅನುಭವಿಸಿರುವ ಭಾರತ ತಂಡವು (Team India) ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೆ (Border-Gavaskar Trophy) ತಯಾರಿ ನಡೆಸುತ್ತಿದ್ದು, ಆಸ್ಟ್ರೇಲಿಯಾ ನೆಲದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡುವ ಪಣತೊಟ್ಟಿದೆ. ನಾವು ನೋಡಿರುವಂತೆ ಸಾಮಾನ್ಯವಾಗಿ ಒಂದು ದ್ವಿಪಕ್ಷೀಯ ಸರಣಿ ಆರಂಭವಾಗುವುದಕ್ಕೂ ಮುನ್ನ ಉಭಯ ತಂಡಗಳ ಮಾಜಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಾರೆ. ಕೆಲವೊಮ್ಮೆ ಈ ಹೇಳಿಕೆಗಳು ಆ ವ್ಯಕ್ತಿಗಳ ಅತಿರೇಕವನ್ನು ತೋರುತ್ತದೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಟಿಮ್ ಪೇನ್ (Tim Paine) ಯುವ ಆಟಗಾರ ಧ್ರುವ್ ಜುರೆಲ್ ಕುರಿತು ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಪೇನ್ (Tim Paine), ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ಎ ತಂಡದ ಪರ ಕಣಕ್ಕಿಳಿದಿದ್ದ ಧ್ರುವ್ ಜುರೆಲ್ (Dhruv Jurel) ಬ್ಯಾಟಿಂಗ್ ಹಾಗೂ ಆಟದ ವೈಖರಿ ನೋಡಿದ ನಂತರ ಆತ ಏನಾದರೂ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆತ ಏನಾದರು ಆಡದಿದ್ದರೆ ನಾನು ಅದರಿಂದ ತತ್ತರಿಸುತ್ತೇನೆ ಎಂಬ ಭಯ ಕಾಡಲು ಶುರುವಾಗಿದೆ. ಆತ 80 ರನ್ಗಳಿಸಿದ ಇದನ್ನು ನೋಡಿ ನಾವು ಆತ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ತಂಡದ ಪರ ನಿಲ್ಲುತ್ತಾನೆ ಎಂಬ ನಂಬಿಕೆ ಮೂಡಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಟಿಮ್ ಪೇನ್ (Tim Paine) ಯುವ ಆಟಗಾರ ಧ್ರುವ್ ಜುರೆಲ್ (Dhruv Jurel) ಕುರಿತು ಮಾತನಾಡಿದ್ದಾರೆ.
ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೆ (Border-Gavaskar Trophy) ರಿಷಬ್ ಪಂತ್ (Rishab Pant) ಜೊತೆಗೆ ಧ್ರುವ್ ಜುರೆಲ್ರನ್ನು (Dhruv Jurel) ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಯುವ ಆಟಗಾರನ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿದೆ. ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಟವಾಡಿ ಅನುಭವ ಹೊಂದಿರುವ ಜುರೆಲ್ ತಂಡದ ರಿಟೇನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 18ನೇ ಆವೃತ್ತಿಯಲ್ಲಿ ಎಲ್ಲರ ಗಮನ ಸೆಳೆಯುವುದು ಪಕ್ಕಾ ಎಂದು ಹೇಳಲಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar) ಟೆಸ್ಟ್ ಸರಣಿಯೂ ನವೆಂಬರ್ 26ಕ್ಕೆ ಆರಂಭವಾಗಲಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.
ಹರಿಯಾಣದ ಈ Buffalo ಬೆಲೆ ಎರಡು Rolls-Royce ಕಾರಿಗೆ ಸಮ; ಕೋಟಿ ಕೊಟ್ರು ನಾಮ್ ಕೋಣ ಮಾರಲ್ಲ ಎಂದ ಮಾಲೀಕ
ನಿರ್ಮಾಣ ಹಂತದ ಕಲ್ವರ್ಟ್ಗೆ ಉರುಳಿದ ಕಾರು; ಮಗು ಸೇರಿದಂತೆ ನಾಲ್ಕು ಮಂದಿ ಸಾವು