ಸಹಕಾರ ಸಂಸ್ಥೆಗಳಿಗೆ ನಂಬಿಕೆಯೇ ಜೀವಾಳ

17sgr2
ಸಾಗರದಲ್ಲಿ ಏರ್ಪಡಿಸಿದ್ದ ಸಾಗರ ಟೌನ್ ಹೌಸ್ ಬಿಲ್ಡಿಂಗ್ ಸೊಸೈಟಿ ಸರ್ವಸದಸ್ಯರ ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಕೆ.ಸತೀಶ್, ಎಸ್.ಬಿ.ರಘುನಾಥ್, ಎನ್.ಬಸವರಾಜ್ ಇತರರಿದ್ದರು.
Published on

ಸಾಗರ: ಸಹಕಾರ ಕಾನೂನುಗಳಲ್ಲಿ ಹೆಚ್ಚು ಬದಲಾವಣೆಗಳು ಆಗುತ್ತಿವೆ. ಗ್ರಾಹಕರಿಗೆ ಕಾನೂನು ಬಗ್ಗೆ ಪ್ರಾಥಮಿಕ ಮಾಹಿತಿ ನೀಡುವುದು ಸಹಕಾರ ಸಂಸ್ಥೆಗಳ ಕರ್ತವ್ಯ ಎಂದು ಸಾಗರ ಪಟ್ಟಣ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಸತೀಶ್ ಹೇಳಿದರು.

ನಗರದ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಾಗರ ಟೌನ್ ಹೌಸ್ ಬಿಲ್ಡಿಂಗ್ ಸೊಸೈಟಿ ಸರ್ವಸದಸ್ಯರ ಸಭೆಯಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಕಾರ ಸಂಸ್ಥೆಗಳಿಗೆ ನಂಬಿಕೆಯೇ ಜೀವಾಳ ಎಂದು ತಿಳಿಸಿದರು.

68 ವರ್ಷಗಳಿಂದ ನಮ್ಮ ಸಂಸ್ಥೆ ಗೃಹ ನಿರ್ಮಾಣ ಮತ್ತು ಮನೆ ರಿಪೇರಿಗೆ ಸಾಲ ಸೌಲಭ್ಯ ನೀಡುತ್ತಿದೆ. ಸಾಲ ವಸೂಲಾತಿ ಪ್ರಮಾಣವೂ ಉತ್ತಮವಾಗಿದ್ದು, ಸಂಸ್ಥೆ ಎ ಗ್ರೇಡ್‌ನಲ್ಲಿದೆ. ಮುಂದಿನ ದಿನಗಳಲ್ಲಿ ಷೇರುದಾರ ಸದಸ್ಯರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತಿದೆ. ಈ ಆರ್ಥಿಕ ಸಾಲಿನಲ್ಲಿ 23 ಲಕ್ಷ ರೂ. ಲಾಭ ಗಳಿಸಿದ್ದು, ಷೇರುದಾರರಿಗೆ ಶೇ. 10 ಡಿವಿಡೆಂಡ್ ನೀಡಲಾಗುತ್ತಿದೆ ಎಂದರು.

ಹಿರಿಯ ಸದಸ್ಯ ಎಸ್.ಬಿ.ರಘುನಾಥ್ ಮಾತನಾಡಿ, ಗೃಹ ನಿರ್ಮಾಣ ಉದ್ದೇಶಕ್ಕೆ ಪೂರಕವಾಗಿ ಸಂಸ್ಥೆ ಸ್ಪಂದಿಸುತ್ತಿದೆ. ಹಿರಿಯ ನಾಗರಿಕರಿಗೆ ವಿಶೇಷ ಬಡ್ಡಿ ನೀಡಲಾಗುತ್ತಿದೆ. ಸಂಸ್ಥೆಯಿಂದ ಪ್ರತಿವರ್ಷ ಸಾಧಕರನ್ನು ಸನ್ಮಾನಿಸುವ ಜತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದೆ ಎಂದು ತಿಳಿಸಿದರು.

ಹಿರಿಯ ಸಹಕಾರಿ ಮಂಜಪ್ಪ, ಪತ್ರಕರ್ತ ಗಣಪತಿ ಶಿರಳಗಿ, ಸಕಾಲಕ್ಕೆ ಸಾಲ ಮರುಪಾವತಿ ಮಾಡಿದ ಲೋಕಾಕ್ಷಮ್ಮ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಷೇರುದಾರರ ಮಕ್ಕಳನ್ನು ಪುರಸ್ಕರಿಸಲಾಯಿತು.

ಉಪಾಧ್ಯಕ್ಷ ಎನ್.ಬಸವರಾಜ್, ಟಿ.ನಾಗಪ್ಪ, ಕೆ.ವ್ನಿೇಶ್ವರ, ಗೋಪಾಲ, ರಾಮಚಂದ್ರ, ಗೋಪಾಲಕೃಷ್ಣ ಶ್ಯಾನಭಾಗ್, ಉಷಾ, ಸುಜಾತಾ, ವಿ.ಪದ್ಮನಾಭ, ಪ್ರಮೋದ್, ಉಮೇಶ್ ಹಿರೇನೆಲ್ಲೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net