ಎಲ್ಲ ಸಮಸ್ಯೆಗಳಿಗೆ ಅಧ್ಯಾತ್ಮದಲ್ಲಿದೆ ಉತ್ತರ

16sor3
ಸೊರಬ ತಾಲೂಕಿನ ಗೌರಿಹಳ್ಳದಲ್ಲಿ ಆಯೋಜಿಸಿದ್ದ ಗೌರಿಶಂಕರ ಪೂಜಾ, ಶಿವಾನುಭವ ಕಾರ್ಯಕ್ರಮದಲ್ಲಿ ಶ್ರೀ ಕುಮಾರ ಕೆಂಪಿನ ವೃಷಭೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಘನಬಸವ ಅಮರೇಶ್ವರ ಶ್ರೀ, ಶಿವಮೂರ್ತಿ ಮುರುಘರಾಜೇಂದ್ರ ಶ್ರೀ, ಶ್ರೀ ಪ್ರಭುಲಿಂಗ ಸ್ವಾಮೀಜಿ ಇತರರಿದ್ದರು.
Published on

ಸೊರಬ: ಅಧ್ಯಾತ್ಮದ ನೆಲೆಯಲ್ಲಿ ಮಕ್ಕಳನ್ನು ಪಾಲಕರು ಬೆಳೆಸಬೇಕು ಎಂದು ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಚಿಕ್ಕಬ್ಬೂರು, ಗುಡುಗಿನಕೊಪ್ಪ, ಹೊಸ ಗುಡುಗಿನಕೊಪ್ಪ ಹಾಗೂ ಕಾನುಕೊಪ್ಪ ಗ್ರಾಮಗಳ ವ್ಯಾಪ್ತಿಯ ಗೌರಿಹಳ್ಳದಲ್ಲಿ ಮಕರ ಸಂಕ್ರಾಂತಿ ಪುಣ್ಯಕಾಲದಲ್ಲಿ ಆಯೋಜಿಸಿದ್ದ ಗೌರಿಶಂಕರ ಪೂಜಾ ಹಾಗೂ ಶಿವಾನುಭವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮಕ್ಕಳನ್ನು ಯೋಗ್ಯ ರೀತಿಯಲ್ಲಿ ಬೆಳೆಸಬೇಕು. ಅಧ್ಯಾತ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತಿರುತ್ತದೆ. ಹೆಚ್ಚು ಆಲೋಚನೆಗೆ ಹಚ್ಚುವ ವಿಷಯದಂತೆ ನೀವೂ ಆಗುತ್ತೀರಿ. ಆದ್ದರಿಂದ ಸದಾ ಒಳ್ಳೆಯ ಚಿಂತನೆಗಳನ್ನು ಮಾಡಬೇಕು ಎಂದು ತಿಳಿಸಿದರು.

ಜಡೆ ಸಂಸ್ಥಾನ ಮಠದ ಶ್ರೀ ಕುಮಾರ ಕೆಂಪಿನ ವೃಷಭೇಂದ್ರ ಸ್ವಾಮೀಜಿ ಮಾತನಾಡಿ, ಜಡೆ ಶ್ರೀ ಪ್ರಭುಕುಮಾರ ಶಿವಯೋಗಿಗಳು ಈ ಸ್ಥಾನವನ್ನು ಅನುಷ್ಠಾನದ ಮೂಲಕ ಕ್ಷೇತ್ರವಾಗಿಸಿದ್ದಾರೆ. ನಿಮ್ಮ ಭಕ್ತಿ ಶ್ರೇಷ್ಠವಾದುದು. ಭಗವಂತನನ್ನು ಭಕ್ತಿಯಿಂದ ಮಾತ್ರ ಒಲಿಸಲು ಸಾಧ್ಯ ಎಂದರು.

ಹಿರೇಮಾಗಡಿಯ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಘೋಡಗೇರಿ ಶ್ರೀ ಪ್ರಭುಲಿಂಗ ಸ್ವಾಮೀಜಿ, ಹಿರೇಮಾಗಡಿ ಶ್ರೀ ಶಿವಯೋಗಿ ದೇವರು, ಗಂಗಾಧರ ದೇವರು, ಲಿಂಗಪ್ಪ ಶರಣರು ಹಾಜರಿದ್ದರು. ಪುಟ್ಟಯ್ಯ ಶಾಸ್ತ್ರಿಗಳಿಂದ ದೇವರಿಗೆ ಅಭಿಷೇಕಾದಿ ಪೂಜೆ ನೆರವೇರಿತು. ಜಾತ್ರಾ ಸಮಿತಿ ಪದಾಧಿಕಾರಿಗಳು, ವಿವಿಧ ಗ್ರಾಮಸ್ಥರು ಪಾಲ್ಗೊಂಡಿದ್ದರು. ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net